ಕಾರ್ಕಳ, ಮೇ 24 (DaijiworldNews/SM): ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಅನುಮತಿ ಪಡೆಯದೇ ಅಕ್ರಮವಾಗಿ ಒಳಪ್ರವೇಶಿಸಿ, ಜೀವ ಬೆದರಿಕೆಯೊಡ್ಡಿ ವಿಡಿಯೋ ಶೂಟಿಂಗ್ ಮಾಡಿದ್ದಲ್ಲದೆ, ಮಾಧ್ಯಮಗಳಲ್ಲಿ ಹಾಗೂ ಬುಕ್ಗಳಲ್ಲಿ ಬಿತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಪತ್ರಕರ್ತ ಸಂಪತ್ ಆತನ ಸಹೋದರ ಸಂತೋಷ್ ಹಾಗೂ ಅತ್ತಿಗೆ ಯಾಗಿರುವ ಅದೇ ಸಂಸ್ಥೆಯ ಶಿಕ್ಷಕಿ ಸೌಮ್ಯ ಆರ್.ನಾಯಕ್ ಪ್ರಕರಣದ ಆರೋಪಿತರಾಗಿದ್ದಾರೆ. ಸಂತೋಷ್ ಸಂಸ್ಥೆಯವರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಸಂಪತ್ ವಿಡಿಯೋ ಶೂಟಿಂಗ್ ಮಾಡಿದ್ದು, ತಿರುಚಿ ಬಿತ್ತರಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಂಸ್ಥೆಯ ಶಿಕ್ಷಕಿ ಸೌಮ್ಯ ಆರ್.ನಾಯಕ್ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ತಿಳಿದುಬಂದಿದೆ.
ಪತ್ರಕರ್ತರ ಸಂಘ ಖಂಡನೆ
ಇನ್ನು ಪತ್ರಕರ್ತನ ವಿರುದ್ಧ ಸುಳ್ಳು ಕೇಸು ದಾಖಲಾಗಿರುವುದಕ್ಕೆ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಘಟನೆ ಕುರಿತು ಮರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಸಿದೆ.