ಉಡುಪಿ, ಮೇ 25(Daijiworld News/MSP): ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ. ಆದರೆ ಉಡುಪಿಯಲ್ಲಿ ಈವರೆಗೆ ಕಂಡುಬಂದ ಹೆಚ್ಚಿನ ಪ್ರಕರಣಗಳಿಗೆ ಹೊರರಾಜ್ಯ ಹಾಗೂ ಹೊರದೇಶದ ನಂಟು ಇರುವುದು ಸ್ಪಷ್ಟವಾಗಿದೆ.
ಮೇ 25 ರ ಸೋಮವಾರ ಒಟ್ಟಾರೆ ಜಿಲ್ಲೆಯಲ್ಲಿ 32 ಪ್ರಕರಣಗಳು ದೃಢಪಟ್ಟಿದೆ. ಈ ಪೈಕಿ ಓರ್ವ 65ವರ್ಷದ ಮಹಿಳೆಗೆ P-1435 ಸಂಪರ್ಕದಿಂದ ಸೋಂಕು ಹರಡಿದ್ದರೆ , ಮತ್ತೋರ್ವ 57 ವರ್ಷದ ವ್ಯಕ್ತಿಗೆ ಕಂಟೋನ್ಮೆಟ್ ಜೋನ್ ನಿಂದ ಸೋಂಕು ಹರಡಿದೆ. ಇಂದು ಪತ್ತೆಯಾದ ಬಾಕಿ ಉಳಿದ ಪ್ರಕರಣಗಳಲ್ಲಿ ಎಲ್ಲರೂ ಮಹಾರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪ್ರಯಾಣದಿಂದ ಹಿಂತಿರುಗಿದವರಾಗಿದ್ದಾರೆ.
ಒಂದು ವರ್ಷದ ಮಗು, 9,3,6, 9,11 , 6, 5, 4, ಹಾಗೂ 11 ವರ್ಷದ ಮಕ್ಕಳಲ್ಲಿ ಕೊವೀಡ್-19 ಪತ್ತೆಯಾಗಿದೆ. ಇಂದಿನ ಪ್ರಕರಣ ಸೇರಿ ಉಡುಪಿ ಜಿಲ್ಲೆಯಲ್ಲಿ ಓಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 108 ಕ್ಕೆ ಏರಿದೆ. ಈ ಪೈಕಿ 104 ಸಕ್ರಿಯ ಪ್ರಕರಣಗಳಾಗಿದ್ದು, ಮೂವರು ಗುಣಮುಖರಾಗಿದ್ದಾರೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.