ಬೆಳ್ತಂಗಡಿ, ಮೇ 25(Daijiworld News/MSP): ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಪರಿಣಾಮ ಅದರ ನಿಯಂತ್ರಣಕ್ಕೆ ಬೆಳ್ತಂಗಡಿ ನಗರ ಪಂಚಾಯತ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಸೋಮವಾರ ನಿಯಮ ಉಲ್ಲಂಘಿಸಿದ ಅಂಗಡಿಗಳ ಮೇಲೆ ಮುಖ್ಯಾಧಿಕಾರಿ ಸುಧಾಕರ್ ನೇತೃತ್ವದಲ್ಲಿ ದಾಳಿ ನಡೆಸಿ ದಂಡ ವಿಧಿಸಿದೆ.
ಸೀಯಾಳದ ಪಾರ್ಸೆಲ್ ಮಾತ್ರ ಕೊಂಡೊಯ್ಯುವ ಅವಕಾಶವಿದ್ದು ಎರಡು ಅಂಗಡಿಗಳಲ್ಲಿ ಕುಡಿಯಲು ನೀಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ದಂಡ ವಿಧಿಸಿದೆ. ಬಳಿಕ ಮಾಸ್ಕ್ ಧರಿಸದೇ ಬಂದವರಿಗೆ 50 ಮಂದಿಗೆ ತಲಾ ನೂರು ರುಪಾಯಿ ದಂಡ ವಿಧಿಸಿದೆ.
ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ, ಮಕ್ಕಳನ್ನು ಮತ್ತು ವೃದ್ಧರನ್ನು ಪೇಟೆಗೆ ಕರೆದುಕೊಂಡು ಬಾರದಂತೆ,ಲಾಕ್ ಡೌನ್ ನಿಯಮ ಪಾಲಿಸುವಂತೆ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿದರು. ಹೋಟೇಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶವಿದ್ದು ಇದನ್ನು ಉಲ್ಲಂಘಿಸಿದ 7 ಹೋಟೇಲ್ ಗಳ ಮೇಲೆ ದಾಳಿ ನಡೆಸಿ ತಲಾ 5 ಸಾವಿರ ದಂಡ ವಿದಿಸಲಾಗಿದೆ.ಇನ್ನು ಮುಂದೆ ಪ್ರತಿ ದಿನ ದಾಳಿ ನಡೆಸಲಾಗುವುದು ತಪ್ಪಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ದಾಳಿ ಸಂದರ್ಭದಲ್ಲಿ ಇಂಜಿನಿಯರ್ ಮಹಾವೀರ ಅರಿಗ, ಪೊಲೀಸ್ ಇಲಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು.