ಉಡುಪಿ, ಮೇ 26 (Daijiworld News/MSP): ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸೋಮವಾರದ ಪ್ರಕರಣಗಳಿಗೆ ಹೋಲಿಸಿದರೆ ಮಂಗಳವಾರ ಕೊಂಚ ನಿಟ್ಟುಸಿರು ಬಿಡುವಂತಾಗಿದ್ದು, ಇಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ 9 ವರ್ಷದ ಹೆಣ್ಣು ಮಗು, 30 ವರ್ಷದ ಮಹಿಳೆ ಹಾಗೂ 27 ವರ್ಷದ ಯುವಕನಲ್ಲಿ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಇವರನ್ನು ನಿಗದಿತ ಕೊವೀಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 111 ಸೋಂಕು ಪ್ರಕರಣ ಪತ್ತೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆ ಆಯಾ ದಿನದ ಸೋಂಕು ಪೀಡಿತರ ವಿವರಗಳನ್ನು ದಿನಕ್ಕೆ ಎರಡಾವರ್ತಿ ಬಿಡುಗಡೆ ಮಾಡುತ್ತಿದ್ದು, ಸೋಮವಾರ ಒಟ್ಟಾರೆ 32 ಪ್ರಕರಣಗಳು ದೃಢಪಟ್ಟಿತ್ತು.