ಸುಳ್ಯ, ಮೇ 26 (Daijiworld News/MSP): ಕಾರು ಚಾಲನೆ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುಳ್ಯದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಕೇನಾಜೆಯ ಪೋಕರ್ ಕುಂಞಿ (55) ಯವರು ಎಂದು ಗುರುತಿಸಲಾಗಿದೆ. ಪೋಕರ್ ಕುಂಞಿ ಅವರು ಮಧ್ಯಾಹ್ನ 12 ರ ಸುಮಾರಿಗೆ ಕಾರು ಚಾಲನೆ ಮಾಡುತ್ತಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದು ಮುಂದಕ್ಕೆ ಬಂದು ಮತ್ತೊಂದು ಕಾರಿಗೆ ತಾಗಿ ನಿಂತಿದೆ. ಇದೇ ವೇಳೆ ಕಾರಿನ ಸ್ಟೇರಿಂಗ್ ಗೆ ಮೇಲೆ ಅವರು ತಲೆ ತಗ್ಗಿಸಿ ಬಿದ್ದರು. ಇದನ್ನು ಗಮನಿಸಿದ ಸ್ಥಳೀಯ ಅಂಗಡಿಯೊಂದರ ವ್ಯಾಪಾರಿ ಬಂದು ಕಾರಿನ ಡೋರ್ ತೆಗೆದು ಹ್ಯಾಂಡ್ ಬ್ರೇಕ್ ಹಾಕಿ ಕಾರು ನಿಲ್ಲಿಸಿ ಮುಂದಾಗಬಹುದಾದ ದುರಂತ ತಪ್ಪಿಸಿದ್ದಾರೆ.
ಬಳಿಕ ಅಲ್ಲಿದ್ದವರು ಪೋಕರೆ ಕುಂಞಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.