ಉಡುಪಿ,ಮಾ 23: ನಮೋ ಅಂದರೆ ನಮಗೆ ಮೋಸವಲ್ಲ, ದೇಶಾದ್ಯಂತ ಸಾಮಾನ್ಯ ಜನರ ಪಾಲಿಗೆ ಮೋದಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ನಮಗೆ ಮೋಸ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿ ವ್ಯಂಗ್ಯವಾಡಿದ ಸಚಿವ ಪ್ರಮೋದ್ ಮದ್ವರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನಮೋ ಎಂದರೆ ಕಾಂಗ್ರೆಸ್ ಪಾಲಿಗೆ ಮೋಸ ಎಂದು ಅನ್ನಿಸಬಹುದು. ಆದರೆ ದೇಶಾದಾದ್ಯಂತ ಸಾಮಾನ್ಯ ಜನರ ಪಾಲಿಗೆ ಇದು ಮೋದಕವಾಗಿದೆ. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಅನಂತರ ಭಾರತ ದೇಶದಾದ್ಯಂತ ಅಭಿವೃದ್ದಿ ಮತ್ತು ರಾಷ್ಟ್ರೀಯತೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ದೇಶದ ಜನಸಾಮಾನ್ಯರು ಸಂತೃಪ್ತರಾಗುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿನಮೋ ಶಕ್ತಿ ಎನು ಎಂಬುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಚಿವ ಪ್ರಮೋದ್ ಮಧ್ವರಾಜ್ ಗೂ ಚೆನ್ನಾಗಿಯೇ ತಿಳಿಯಲಿದೆ ಎಂದರು.