ಮಂಗಳೂರು, ಮೇ 27 (Daijiworld News/MSP): ಜೂ.1 ರಿಂದ ರಾಜ್ಯದ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೇ, ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ವಿರೋಧ ವ್ಯಕ್ತಪಡಿಸಿದೆ.
"ಕೊರೊನಾ ಸಾಂಕ್ರಮಿಕ ರೋಗವನ್ನು ತಡೆಯುವ ದೃಷ್ಟಿಯಿಂದ ರಾಜ್ಯದ ಎಲ್ಲಾ ದೇಗುಲ,ಚರ್ಚ್, ಮಸೀದಿಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಸರ್ಕಾರ ಇದೀಗ ಜೂ. 1 ದೇವಸ್ಥಾನ ತೆರೆಯಲು ಅವಕಾಶ ನೀಡಿದೆ. ರಂಜಾನ್ ಸಂದರ್ಭದಲ್ಲೇ ನಾವು ಮಸೀದಿಗೆ ಹೋಗದೆ ಮನೆಯಲ್ಲಿದ್ದೆವು. ಈಗ ಒಂದು ಧರ್ಮದ ಪ್ರಾರ್ಥನಾ ಕೇಂದ್ರ ಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು ತಪ್ಪು. ಕೇವಲ ದೇವಸ್ಥಾನ ಮಾತ್ರ ಯಾಕೆ? ಮಸೀದಿ, ಚರ್ಚ್'ಗೂ ಹೀಗೆ ಎಲ್ಲಾ ಧರ್ಮದ ಪ್ರಾರ್ಥನಾ ಕೇಂದ್ರ ಗಳಿಗೆ ಅವಕಾಶ ನೀಡಬೇಕು" ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ ಎಸ್ ಮಸೂದ್ ಆಗ್ರಹಿಸಿದ್ದಾರೆ.
ಇದೊಂದು ಧಾರ್ಮಿಕವಾಗಿ ಸೂಕ್ಷ್ಮ ವಿಚಾರವಾಗಿದೆ. ಹೀಗಾಗಿ ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲರಿಗೂ ಅವಕಾಶ ನೀಡಬೇಕು ಎಂದು ಇದೇ ವೇಳೆ ಕೆ ಎಸ್ ಮಸೂದ್ ಆಗ್ರಹಿಸಿದ್ದಾರೆ.