ಪುತ್ತೂರು, ಮೇ 27 (Daijiworld News/MSP): ಅಂಗಡಿಯೊಳಗೆ ಪ್ರವೇಶಿಸಬೇಕೆಂದರೆ ಮುಖಗವಸು ಧರಿಸುವುದು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ಅಂಗಡಿ ಬನ್ನಿ ಅಂದ ಅಂಗಡಿ ಸಿಬ್ಬಂದಿಗೆ ಹಲ್ಲೆ ಮಾಡಿದ ಘಟನೆ ಪುತ್ತೂರಿನ ರಿಲಯನ್ಸ್ ಮಾರ್ಟ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಾಸ್ಕ್ ಇಲ್ಲದೆ ಅಂಗಡಿ ಪ್ರವೇಶಿಸಲು ಯುವಕರ ಗುಂಪೊಂದು ಯತ್ನಿಸಿದ್ದು, ಈ ವೇಳೆ ಅಂಗಡಿಯ ಸೆಕ್ಯುರಿಟಿ ಗಾರ್ಡ್ ಮಾಸ್ಕ್ ಧರಿಸಿ ಬರುವಂತೆ ತಿಳಿಸಿದ್ದಾನೆ. ಈ ಸಂದರ್ಭ ಗಾರ್ಡ್ ಜೊತೆ ಯುವಕರ ಗುಂಪು ಘರ್ಷಣೆಗಿಳಿದಿದೆ. ಬಳಿಕ ಮಾತಿಗೆ ಮಾತು ಬೆಳೆದು ರಿಲಯನ್ಸ್ ಮಾರ್ಟ್ ಸಿಬ್ಬಂದಿಗೆ ಹೆಲ್ಮೆಟ್ ನಿಂದ ಯುವಕರ ಗುಂಪು ಹಲ್ಲೆ ಮಾಡಿದೆ.
ಘಟನೆ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.