ಉಡುಪಿ, ಮೇ 27 (Daijiworld News/MB) : ಉಡುಪಿಯಲ್ಲಿ ಮೇ 26 ರ ಸಂಜೆ 5 ರಿಂದ ಮೇ 27 ರ ಮಧ್ಯಾಹ್ನ 12 ರವರೆಗೆ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 9 ವರ್ಷದ ಬಾಲಕ ಸೇರಿ 7 ಪುರುಷರಿಗೆ ಹಾಗೂ 2 ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಎಲ್ಲಾ 9 ಕೊರೊನಾ ಸೋಂಕಿತರು ಕೂಡಾ ಮಹಾರಾಷ್ಟ್ರದಿಂದ ವಾಪಾಸ್ ಬಂದವರಾಗಿದ್ದಾರೆ.