ಕಾಸರಗೋಡು, ಮೇ 27 (Daijiworld News/MSP): ಟೂರಿಸ್ಟ್ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಪಾನ್ ಉತ್ಪನ್ನವನ್ನು ಕಾಸರಗೋಡು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು , ಇಬ್ಬರನ್ನು ಬಂಧಿಸಿದ್ದಾರೆ .
ಬಂಧಿತರನ್ನು ನೆಲ್ಲಿಕಟ್ಟೆ ಸಾಲೆ ತ್ತಡ್ಕದ ಮುಹಮ್ಮದ್ ರಿಯಾಜ್ (28) ಮತ್ತು ಪೊವ್ವಲ್ ನ ಮುಹಮ್ಮದ್ ನೌಶಾದ್ (30) ಎಂದು ಗುರುತಿಸಲಾಗಿದೆ . ಇವರು ಸಾಗಿಸುತ್ತಿದ್ದ 7,704 ಪ್ಯಾಕೆಟ್ ಪಾನ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ರಾತ್ರಿ ಹೊಸ ಬಸ್ಸು ನಿಲ್ದಾಣ ಪರಿಸರದಿಂದ ವಶಪಡಿಸಿಕೊಳ್ಳಲಾಗಿದೆ . ಪಾನ್ ಉತ್ಪನ್ನಗಳನ್ನು ಕಾಸರಗೋಡಿನಿಂದ ಎರ್ನಾಕುಲಂ ಗೆ ಸಾಗಿಸಲೆತ್ನಿಸಲಾಗುತ್ತಿತ್ತು ಎನ್ನಲಾಗಿದೆ.
ನಗರ ಠಾಣಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪಾನ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ .ಬಸ್ಸಿನೊಳಗಿನ ನಾಲ್ಕು ಕಾರ್ಡ್ ಬೋರ್ಡ್ ನ್ನು ತೆಗೆದು ಅದರೊಳಗೆ ಬಚ್ಚಿಡಲಾಗಿತ್ತು . ಎರ್ನಾಕುಲಂ ಗೆ ಸಾಗಿಸಲಾಗುತ್ತಿತ್ತು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಮಾದಕ ವಸ್ತು ಬೆರೆಸಿದ ಈ ಪಾನ್ ಉತ್ಪನ್ನಗಳನ್ನು ಕರ್ನಾಟಕದಿಂದ150 ರೂ . ಗೆ ಖರೀದಿಸಿ ಕೇರಳದಲ್ಲಿ ಎರಡು ಪಟ್ಟು ಅಧಿಕ ಬೆಲೆ ಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ