ಕಾಸರಗೋಡು, ಮೇ 27 (DaijiworldNews/SM): ಜಿಲ್ಲೆಯಲ್ಲಿ ಬುಧವಾರ 10 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಆಗಮಿಸಿದ 8 ಮಂದಿಗೆ, ವಿದೇಶದಿಂದ ಆಗಮಿಸಿದ ಒಬ್ಬ ಮಹಿಳೆ ಸಹಿತ ಇಬ್ಬರಿಗೆ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ. ರಾಮದಾಸ್ ತಿಳಿಸಿ ದ್ದಾರೆ.
34 ವರ್ಷದ ವರ್ಕಡಿ ನಿವಾಸಿ, 40 ವರ್ಷದ ಮೀಂಜ ನಿವಾಸಿ, 22 ವರ್ಷ ಮಂಜೇಶ್ವರ ನಿವಾಸಿ, 47 ವರ್ಷದ ಮಂಗಲ್ಪಾಡಿ ನಿವಾಸಿ, 28, 33,38 ವರ್ಷದ ಚೆಮ್ನಾಡ್ ನಿವಾಸಿಗಳು, 56, 40, 56 ವರ್ಷದ ಕಾಸರಗೋಡು ನಗರಸಭೆ ನಿವಾಸಿಗಳು ರೋಗ ಬಾಧಿತರಾಗಿದ್ದಾರೆ. ಇವರಲ್ಲಿ ಚೆಮ್ನಾಡ್ ನಿವಾಸಿ 38 ವರ್ಷದವರು ಮಹಿಳೆಯಾಗಿದ್ದು, 33 ವರ್ಷದ ವ್ಯಕ್ತಿ ಇಬ್ಬರೂ ಯು.ಎ.ಇ.ಯಿಂದ ಆಗಮಿಸಿದ್ದರು.
ಇದೇ ವೇಳೆ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ 43 ವರ್ಷದ ಕೋಡೋಂ-ಬೇಳೂರು ನಿವಾಸಿ, ಕುಂಬಳೆ ನಿವಾಸಿ 56 ವರ್ಷದ ವ್ಯಕ್ತಿ ಫಲಿತಾಂಶ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ 3369 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2797, ಆಸ್ಪತ್ರೆಗಳಲ್ಲಿ 572 ಮಂದಿ ನಿಗಾದಲ್ಲಿದ್ದಾರೆ. 32 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 49 ಮಂದಿಯನ್ನು ಬುಧವಾರ ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ 6464 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5749 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 283 ಮಂದಿಯ ಫಲಿತಾಂಶ ಲಭಿಸಿಲ್ಲ.