ಮಂಗಳೂರು, ಮೇ 27 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮೂವರು ಕೂರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಇಬ್ಬರು ಸೇರಿಂದಂತೆ ಒಟ್ಟು ಮೂವರು ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕಾರ್ಕಳದ 26 ವರ್ಷದ ಗಂಡಸು, 50 ಹಾಗೂ ಸೋಮೇಶ್ವರದ 38 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ. ಕಾರ್ಕಳದ 26 ವರ್ಷದ ವ್ಯಕ್ತಿ ಹಾಗೂ 50 ವರ್ಷದ ಮಹಿಳೆಯಲ್ಲಿ ಮೇ 12ರಂದು ಸೋಂಕು ದೃಢಪಟ್ಟಿತ್ತು. ಇನ್ನು ಸೋಮೇಶ್ವರ ನಿವಾಸಿಯಲ್ಲಿ ಮೇ 13ರಂದು ಸೋಂಕು ದೃಢಪಟ್ಟಿತ್ತು.
ಈ ಎಲ್ಲರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.