ಮಂಗಳೂರು, ಮೇ 28 (Daijiworld News/MB) : ದುಬೈನಿಂದ ಪತಿಯೊಂದಿಗಿದ್ದ ಮಹಿಳೆ ಮಂಗಳೂರಿಗೆ ಬಂದ್ದು ಕ್ವಾರಂಟೈನ್ನಲ್ಲಿದ್ದು ಗರ್ಭಿಣಿಯಾದ ಆಕೆಗೆ ಸೂಕ್ತವಾದ ಚಿಕಿತ್ಸೆ ಲಭಿಸದ ಕಾರಣ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
ಈ ಮಹಿಳೆ ತನ್ನ ಹೆರಿಗೆಗಾಗಿ ಮಂಗಳೂರಿಗೆ ದುಬೈನಿಂದ ವಾಪಾಸ್ ಆಗಬೇಕಿತ್ತು. ಅರ್ಜಿ ಸಲ್ಲಿಸಿದ ಬಳಿಕ ಪ್ರಥಮ ವಿಮಾನದಲ್ಲೇ ಅವಕಾಶ ಲಭಿಸಿದ್ದು ಮೇ 12 ರಂದು ಮಂಗಳೂರಿಗೆ ತಲುಪಿದ್ದರು. ಹೊಟೇಲ್ ಕ್ವಾರಂಟೈನ್ನಲ್ಲಿದ್ದ ಅವರ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಆ ಬಳಿಕ ಜಿಲ್ಲಾಡಳಿತದ ಪತ್ರದೊಂದಿಗೆ ಫ್ಲ್ಯಾಟ್ಗೆ ತೆರಳಿದ್ದು ಅಲ್ಲಿ ನಿರಾಕರಿಸಿದ್ದಾರೆ ಎಂದು ದೂರಲಾಗಿದೆ.
ಇನ್ನು ಎಲ್ಲಾ ವೈದ್ಯಕೀಯ ವ್ಯವಸ್ಥೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದರೂ ಕೂಡಾ ಕಾಯಬೇಕಾಗಿ ಬರುತ್ತಿತ್ತು. ಮೈ ಮುಟ್ಟಿ ಚಿಕಿತ್ಸೆ ನೀಡಲು ಮನಸ್ಸಿಲ್ಲದ ವೈದ್ಯರು ಬಿಪಿ ಚೆಕ್ಅಪ್ ಕಿಟ್ ಮರೆತಿರುವುದಾಗಿ ನೆಪ ಹೇಳುತ್ತಿದ್ದರು ಎಂದು ಗರ್ಭಿಣಿಯ ಸೋದರ ಮಾವ ಅಝೀಜ್ ಬಸ್ತಿಕರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ವರದಿ ನೆಗೆಟಿವ್ ಬಂದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದ ವೈದ್ಯರೂ 14 ದಿನ ಕ್ವಾರಂಟೈನ್ ಮುಗಿದ ಮೇಲೆಯೇ ಚಿಕಿತ್ಸೆ ಎಂದು ಹೇಳಿದ್ದಾರೆಂದು ಆಪಾದಿಸಿದ್ದು ಇನ್ನು 2 ನೇ ತಪಾಸಣೆ ನೆಗೆಟಿವ್ ಬಂದ ಕೂಡಲೇ ಆಸ್ಪತ್ರೆಗೆ ಬಂದಾಗ ಮಗು ಮೃತಪಟ್ಟಿದೆ. ತಾಯಇ ಜೀವ ಉಳಿಸಬೇಕಾದ್ದಲ್ಲಿ ಬಲವಂತದ ಹೆರಿಗೆ ಮಾಡಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಗರ್ಭಿಣಿಯರ ಪ್ರಥಮ ಕೊರೊನಾ ತಪಾಸಣಾ ವರದಿ ನೆಗೆಟಿವ್ ಬಂದಾಗಲೇ ಅವರನ್ನು ಮನೆಗೆ ಕಳುಹಿಸಲಾಗಿದ್ದು ಮಹಿಳೆಗೆ ಅನ್ಯಾಯವಾಗಿದ್ದಲ್ಲಿ ದೂರು ನೀಡಲಿ. ಪ್ಲ್ಯಾಟ್ನಲ್ಲಿ ಸೇರಿಸಿಕೊಳ್ಳದ ಬಗ್ಗೆ ಹಾಗೂ ಚಿಕಿತ್ಸೆಗೆ ನೀಡದ ಬಗ್ಗೆ ತನಿಖೆಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.