ಮಂಗಳೂರು, ಮೇ 28 (DaijiworldNews/PY) : ಸಾಗರದಾಚೆಗೆ ಅತಂತ್ರರಾಗಿರುವ ಕಾರ್ಮಿಕರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಗಳು ರಕ್ಷಣೆ ಮಾಡಿದ್ದು, ಎರಡು ತಿಂಗಳ ಬಳಿಕ ಕಾರ್ಮಿಕರು ಮಂಗಳೂರಿಗೆ ವಾಪಾಸ್ಸಾಗಿದ್ದಾರೆ.
ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ ಮೂವರು ಮಹಿಳೆಯರು ಸೇರಿದಂತೆ 19 ಮಂದಿ ಕಾರ್ಮಿಕರು ಅಮಿನ್ ದಿವಿ ಹೆಸರಿನ ನೌಕೆಯಲ್ಲಿ ಮಂಗಳೂರಿಗೆ ವಾಪಾಸ್ಸಾಗಿದ್ದಾರೆ.
ಈ ಕಾರ್ಮಿಕರು ವ್ಯಾಪಾರ, ಟೈಲ್ಸ್ ಕೆಲಸ, ಗುಜುರಿ ಸಂಗ್ರಹ ಸೇರಿದಂತೆ ವಿವಿಧ ಕೆಲಸಗಳಿಗೆ ಲಕ್ಷದ್ವೀಪಕ್ಕೆ ತೆರಳಿದ್ದರು. ಆದರೆ, ಲಾಕ್ಡೌನ್ ಹಿನ್ನಲೆ ಅವರು ಲಕ್ಷದ್ವೀಪದ ಕಿಲ್ತಾನ್, ಕವರತ್ತಿ, ಅಗಟ್ಟಿ ದ್ವೀಪದಲ್ಲಿ ಬಾಕಿಯಾಗಿದ್ದರು.
ಇಂಡಿಯನ್ ಕೋಸ್ಟ್ ಗಾರ್ಡ್ ಗಳ ಸಹಾಯದಿಂದ ಮಂಗಳೂರಿಗೆ ವಾಪಾಸ್ಸಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.