ಕಡಬ, ಮೇ 28 (Daijiworld News/MSP): ಮಸೀದಿಯಲ್ಲಿ ನಮಾಜ್ ನೆರವೇರಿಸುತ್ತಿರುವಾಗ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಡಬದ ಕಳಾರ ಎಂಬಲ್ಲಿ ನಡೆದಿದೆ.

ಮೃತರನ್ನು ಕಳಾರ ನಿವಾಸಿ 65 ವರ್ಷದ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಪ್ರತಿನಿತ್ಯ ಅಝಾನ್ ಕೊಡಲೆಂದು ಮಸೀದಿಗೆ ತೆರಳಿ ತಮ್ಮ ಪಾಡಿಗೆ ನಮಾಜ್ ಆರಂಭಿಸಿದಾಗ ಇದ್ದಕ್ಕಿಂದತೆ ಅಬ್ದುಲ್ ಖಾದರ್ ಕುಸಿದು ಬಿದ್ದಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ತಿ ಇದನ್ನು ಗಮನಿಸಿ ಅವರನ್ನು ಆರೈಕೆ ಮಾಡಿದ್ದಾರೆ. ಬಳಿಕ ಖಾಸಗಿ ವೈದ್ಯರ ಮೂಲಕ ಪರೀಕ್ಷಿಸಿದಾಗ ಅಬ್ದುಲ್ ಖಾದರ್ ರವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ
ಘಟನಾ ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.