ಮಂಗಳೂರು, ಮೇ 28 (DaijiworldNews/SM): ದ.ಕ. ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 24 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಗುರುವಾರ ಮಧ್ಯಾಹ್ನದ ಬುಲೆಟಿನ್ ನಲ್ಲಿ 6 ಮಂದಿಯ ಪಾಸಿಟಿವ್ ವರದಿ ಲಭ್ಯವಾಗಿತ್ತು. ಆದರೆ, ಸಂಜೆಯ ಬುಲೆಟಿ ನಲ್ಲಿ ಮತ್ತೆ 18 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಒಂದೇ ದಿನ 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಎಲ್ಲಾ ಸೋಂಕಿತರು ಮುಂಬೈನಿಂದ ಬಂದಿದ್ದರು.
ಇನ್ನು ಉಡುಪಿ ಜಿಲ್ಲೆಯಲ್ಲೂ ಒಂದೇ ದಿನ 29 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಬೆಳಗ್ಗಿನ ಬುಲೆಟಿನ್ ನಲ್ಲಿ 27 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ, ಸಂಜೆಯ ಬುಲೆಟಿನ್ ನಲ್ಲಿ ಮತ್ತೆ ಇಬ್ಬರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಇಂದು ಉಡುಪಿಯಲ್ಲಿ 29 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ತೆಲಂಗಾಣ, ಕೇರಳದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದ 26 ಜನರಲ್ಲಿ ಸೋಂಕು ದೃಢಪಟ್ಟಿದ್ದರೆ, ತೆಲಂಗಾಣದಿಂದ ಬಂದ ಇಬ್ಬರಲ್ಲಿ ಹಾಗೂ ಕೇರಳದಿಂದ ಬಂದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಉಡುಪಿಯಲ್ಲಿ ಒಟ್ಟು 147 ಆಕ್ಟಿವ್ ಪಾಸಿಟಿವ್ ಕೇಸ್ ಗಳಿವೆ.