ಉಡುಪಿ, ಮೇ 29 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದೆ, ಶುಕ್ರವಾರ ರಾಜ್ಯದ ಬೆಳಗ್ಗಿನ ಬುಲೆಟಿನ್ ಪ್ರಕಾರ 15 ಪ್ರಕರಣ ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕು ಪೀಡಿತ ಪ್ರಕರಣಗಳ ಸಂಖ್ಯೆ 164 ಕ್ಕೆ ಏರಿಕೆಯಾಗಿದೆ. ಒಟ್ಟು 161ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಮೂವರು ಬಿಡುಗಡೆಗೊಂಡಿದ್ದು ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಅತಿ ಹೆಚ್ಚು ಸೋಂಕು ಪೀಡಿತರ ಪೈಕಿ ಉಡುಪಿ ಐದನೇ ಸ್ಥಾನದಲ್ಲಿದೆ.
ಇಂದು ಪತ್ತೆಯಾದ 15 ಪ್ರಕರಣಗಳೂ ಕೂಡಾ ಮಹಾರಾಷ್ಟ್ರ ರಾಜ್ಯದ ಸಂಪರ್ಕದ್ದಾಗಿದೆ. 6 ಹಾಗೂ 7 ವರ್ಷದ ಬಾಲಕರಿಗೆ ಹಾಗೂ 9 ಮಂದಿ ಪುರುಷರಲ್ಲಿ ಹಾಗೂ 4 ಮಂದಿ ಮಹಿಳೆಯರಿಗೆ ಸೋಂಕು ತಗುಲಿದೆ.