ಮಂಗಳೂರು, ಮೇ 29 (Daijiworld News/MSP): ಉಳ್ಳಾಲದ ಸಮುದ್ರದಲ್ಲಿ ಮುಳುಗುತ್ತಿರುವ ಮುಸ್ಲಿಂ ಮಹಿಳೆಯನ್ನು, ವಿಕ್ರಂ ಪುತ್ರನ್ ಹಾಗೂ ಕುನಾಲ್ ಅಮೀನ್ ಎಂಬಿಬ್ಬ ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ
ವಿಕ್ರಂ ಪುತ್ರನ್ ಹಾಗೂ ಕುನಾಲ್ ಅಮೀನ್ ಇವರು ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿವಾಜಿ ಜೀವರಕ್ಷಕ ಯುವಕ ಮಂಡಲ, ಮೊಗವೀರ ಪಟ್ಣ ಉಳ್ಳಾಲ ಇದರ ಸದಸ್ಯರಾಗಿದ್ದಾರೆ.
ಮಾನವೀಯತೆ ಎಂಬುವುದು ಧರ್ಮಕ್ಕೆ ಮೀರಿದ ವಿಚಾರ. ಅವಶ್ಯಕತೆ ಬಂದಾಗ ಮುಸಲ್ಮಾನರು ಹಿಂದೂಗಳನ್ನು , ಹಿಂದುಗಳು ಮುಸಲ್ಮಾನರನ್ನು ಧರ್ಮ ನೋಡದೆ ಕೇವಲ ಮಾನವೀಯತೆಯ ಆಧಾರದ ಮೇಲೆ ರಕ್ಷಿಸುವುದು ತುಳುನಾಡಿನ ಸಂಪ್ರದಾಯ ಎಂದು ಅವರು ಹೇಳಿದ್ದಾರೆ.
ಮೇ 24 ರಂದು , ಪಾಣೆಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿದ ಕಲ್ಲಡ್ಕದ 19 ವರ್ಷದ ನಿಶಾಂತ್ ಎಂಬ ಯುವಕನನ್ನು ಮುಸ್ಲಿಂ ಯುವಕರು ಪ್ರಾಣದ ಹಂಗು ತೊರೆದು ರಕ್ಷಿಸಿಲು ಯತ್ನಿಸಿದ್ದರು. ಆದರೆ ಪ್ರಥಮ ಚಿಕಿತ್ಸೆಗೆ ಸ್ಪಂದಿಸದೆ ನಿಶಾಂತ್ ಮೃತಪಟ್ಟಿದ್ದರು.