ಕಾರ್ಕಳ, ಮೇ 29 (Daijiworld News/MSP): ಕಾರ್ಕಳ ನಗರದ ಪೆರ್ವಾಜೆ ಪರಿಸರದಲ್ಲಿ ಮೂರು ಕಾಡುಕೋಣಗಳು ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿವೆ.ಶುಕ್ರವಾರ ಬೆಳಿಗ್ಗಿನ ವೇಳೆಗೆ ಏಕಾಏಕಿಯಾಗಿ ಮೂರು ಕಾಡುಕೋಣಗಳು ಪೆರ್ವಾಜೆ-ಬಂಡಿಮಠ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ದಾಟಿ ಹೋಗಿದೆ.
ದುರ್ಗ ಮಲೆಬೆಟ್ಟು ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಡುಕೋಣಗಳಿದ್ದು, ಅಗ್ಗಿಂದಾಗೆ ಅ ಅವುಗಳು ದಾರಿತಪ್ಪಿ ಕಾಣಸಿಗುತ್ತಿವೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಕಾಡುಕೋಣಗಳು ಕಾಣಸಿಕ್ಕಿವೆ ಎಂದು ಸ್ಥಳೀಯ ನಿವಾಸಿಯೊಬ್ಬರು ನೆನಪಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಅಗಮಿಸಿದ್ದು, ಕಾಡುಕೋಣಗಳ ಸಂಚರದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.