ಮಂಗಳೂರು, ಮಾ 24: ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ಮೂರನೇ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ಭಜರಂಗದಳ ಕಾರ್ಯಕರ್ತ ಮತ್ತು ಆಟೋ ಚಾಲಕನಾಗಿದ್ದ ರಾಜೇಶ್ ಪೂಜಾರಿಯನ್ನು ಮಾ. 24, 2014 ರಲ್ಲಿ ಬೆಂಜನಪದವು ಎಂಬಲ್ಲಿ ದುಷ್ಕರ್ಮಿಗಳು ಕೊಲೆ ನಡೆಸಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ಆರು ಮಂದಿ ಅಮಾಯಕರ ಮೇಲೆ ಕೊಲೆ ಆರೋಪ ಹೊರಿಸಿದ್ದರು. ಅದರಲ್ಲಿ ಇಮ್ರಾನ್, ಹುಸೈನ್, ಇರ್ಷಾದ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪೊಲೀಸರು ಅಮಾಯಕರನ್ನು ಬಂಧಿಸಿ ಪ್ರಕರಣದ ಹಿಂದಿರುವ ನೈಜ ಕಾರಣಗಳನ್ನು ಮರೆಮಾಚಿದ್ದರು ಎನ್ನುವ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದ ಹಿನ್ನೆಲೆಯಲ್ಲಿ ಇಮ್ರಾನ್ (23), ಹುಸೈನ್ (21), ಇರ್ಷಾದ್ (23) ಈ ಮೂವರು ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.