ಮಂಗಳೂರು, ಮೇ 30 (DaijiworldNews/PY) : ಕೊರೊನಾ ವೈರಸ್ ಹಿನ್ನೆಲೆ ಜಾರಿಯಾದ ಲಾಕ್ಡೌನ್ನ ಪರಿಣಾಮ ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರು ಕೆಲಸ ಕಳೆದುಕೊಂಡು, ಬೆಂಬಲವನ್ನೂ ಕಳೆದುಕೊಂಡ ಬಳಿಕ ಅಂತಿಮವಾಗಿ ತಮ್ಮ ಮನೆಗಳಿಗೆ ಮರಳಲು ಭರವಸೆಯ ಆಶಾಕಿರಣ ದೊರತಿದೆ.
ಕೆಲವು ಕಂಪೆನಿಗಳು, ಯಾವುದೇ ಕೆಲಸವಿಲ್ಲದವರನ್ನು ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಲು ಮಾಡಿದ ಪ್ರಯತ್ನ ಫಲ ನೀಡಿವೆ. ಈ ಪರಿಣಾಮವಾಗಿ, ಈ ಕಂಪೆನಿಗಳು ನೇಮಕ ಮಾಡಿದ ಖಾಸಗಿ ವಿಮಾನಗಳ ಮೂಲಕ ಈ ನೌಕರರು ನಗರಕ್ಕೆ ಮರಳಲಿದ್ದಾರೆ. ಮೇ 30ರ ಶನಿವಾರದಿಂದ ಈ ವಿಮಾನಗಳು ಕಾರ್ಯನಿರ್ವಹಿಸಲು ಆರಂಭಿಸಲಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡಲು ಭೇಟಿ ವೀಸಾಗಳಲ್ಲಿ ಅಲ್ಲಿಗೆ ಹೋದವರು ಸಹ ಹಿಂದಿರುಗಲಿದ್ದಾರೆ.
ಕರ್ನಾಟಕದ ಎನ್ಆರ್ಐ ಫೋರಂನ ಮಾಜಿ ಉಪಾದ್ಯಕ್ಷೆ ಡಾ.ಆರತಿ ಕೃಷ್ಣ ಅವರು ಸಂಕಷ್ಟಕ್ಕೊಳಗಾದ ಭಾರತೀಯ ವಲಸಿಗ ಕಾರ್ಮಿಕರನ್ನು ಮರಳಿ ಊರಿಗೆ ತೆರಳುವ ಸಲುವಾಗಿ ಅನುಮೋದನೆ ಪಡೆಯುವ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಗ್ಗೆ ಮಾತನಾಡಿದ ಅವರು, ಇಬ್ಬರು ಮಂಗಳೂರು ಉದ್ಯಮಿಗಳನ್ನು ಸಂಪರ್ಕಿಸಿದ್ದು, ಅವರನ್ನು ಚಾರ್ಟಡ್ ವಿಮಾನಗಳ ಮೂಲಕ ಮನೆಗೆ ಕಳುಹಿಸಲು ಬಯಸಿದ್ದರು. ಅಲ್ಲದೇ, ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಅಸುಫ್ ಸೈಯ್ಯದ್ ಅವರಿಗೆ ಪತ್ರ ಬರೆಯುವಂತೆ ಸಲಹೆ ನೀಡಿದ್ದು, ನಂತರ ಅವರು ವಿದೇಶಾಂಗ ಸಚಿವಾಲಯದಲ್ಲಿ ಕೊಲ್ಲಿ ವಿಭಾಗದ ಉಸ್ತುವಾರಿ ವಹಿಸಿರುವ ಜಂಟಿ ಕಾರ್ಯದರ್ಶಿ ಡಾ.ನಾಗೇಂದ್ರ ಪ್ರಸಾದ್ ಅವರಿಗೆ ಕಳುಹಿಸಲು ಕೋರಿದ್ದಾರೆ. ಬಳಿಕ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ಟಿ.ಎಸ್.ತಿರುಮೂರ್ತಿ ಅವರ ಬಳಿಯು ಈ ವಿಷಯವಾಗಿ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ, ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹಾಗೂ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗೂ ಈ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇನೆ. ಹಾಗಾಗಿ ಈ ಮನವಿ ಇದೀಗ ದೃಢಪಟ್ಟಿದೆ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ ಎಸ್ ಶೇಖ್ ಕಾರ್ನೈರ್ ಹಾಗೂ ಅವರ ಸಹೋದರರು, ಮುಂದಿನ ವಾರದಲ್ಲಿ ಎರಡು ಬಾಡಿಗೆ ವಿಮಾನಗಳ ಮೂಲಕ ಜನರನ್ನು ಮಂಗಳೂರಿಗೆ ಕಳುಹಿಸಲು ಅನುಮತಿ ಪಡೆಯಲಾಗಿದೆ. ಮೊದಲ ಎರಡು ವಿಮಾನಗಳಲ್ಲಿ 360 ಜನರು ತೆರಳಲಿದ್ದಾರೆ. ಕಂಪೆನಿಯ ವತಿಯಿಂದ ನೇಮಕ ಮಾಡಲಾದ ಏಳು ವಿಮಾನಗಳ ಮೂಲಕ ಜನರು ನವದೆಹಲಿ, ತಿರುವನಂತಪುರಂ, ಹೈದರಾಬಾದ್ ಮತ್ತು ಚೆನ್ನೈಗೆ ಪ್ರಯಾಣಿಸಲಿದ್ದಾರೆ. ಭಾರತಕ್ಕೆ ತಲುಪಿದ ಬಳಿಕ ಅವರ ಪ್ರಯಾಣ ವೆಚ್ಚವನ್ನು ಹಾಗೂ ಕ್ವಾರಂಟೈನ್ ವೆಚ್ಚವನ್ನು ನಮ್ಮ ಕಂಪೆನಿಯೇ ಭರಿಸಲಿದೆ. ನಾವು ಆರು ವಾರಗಳಿಂದ ನಡೆಸುತ್ತಿರುವ ಪ್ರಯತ್ನವು ಅಂತಿಮವಾಗಿ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಹೋದರರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಾವು ಚಿರರುಣಿಯಾಗಿದ್ದೇವೆ. ಇಲ್ಲಿನ ಜನರ ಆಗಮನಕ್ಕೆ ಅನುಮತಿ ನೀಡಿದೆ ಅಲ್ಲದೇ ಅವರಿಗೆ ಕ್ವಾರಂಟೈನ್ ವ್ಯವಸ್ಥೆಯನ್ನೂ ಮಾಡಿದೆ ಎಂದರು.