ಉಳ್ಳಾಲ, ಮೇ 30 (Daijiworld News/MSP): ಅಂತರಾಜ್ಯಗಳಿಂದ ಆಗಮಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಸರಕಾರಿ ವಿದ್ಯಾರ್ಥಿ ನಿಲಯ ಮತ್ತು ಖಾಸಗಿ ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಗೆ ತೆರಳಲು ಅನುಮತಿ ನೀಡಿ ಬಿಡುಗಡೆಗೊಳಿಸಲಾಯಿತು.
ಕೇರಳ, ಗುಜರಾತ್, ತಮಿಳುನಾಡು ಹಾಗೂ ಇತರ ರಾಜ್ಯಗಳಿಂದ ಆಗಮಿಸಿ ಸರಕಾರಿ ಮತ್ತು ಖಾಸಗಿ ಕ್ವಾರಂಟೈನ್ ನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಜನರಿಗೆ ಆಶಾ ಕಾರ್ಯಕರ್ತೆಯರು ಹೋಮ್ ಕ್ವಾರಂಟೈನ್ ಮೊಹರು ಹಾಕಿ ಹಾಗೂ ಮುಂಜಾಗ್ರತಾ ಕ್ರಮ ಹಾಗೂ ಹೋಮ್ ಕ್ವಾರಂಟೈನ್ ನಿಯಮಗಳನ್ನು ತಿಳಿಸಿ ಬೀಳ್ಕೊಟ್ಟರು.
ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್ ಸೇರಿದಂತೆ 10 ಗ್ರಾಮಗಳ ಅಂತರಾಜ್ಯ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗಿದ್ದರು.
ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಮಹಮ್ಮದ್ ಮಮ್ಮುಂಜಿ ಕಾಟುಕೋಡಿ, ಸಿದ್ದಿಖ್ ನಡುಪದವು, ಅಬೂಬಕ್ಕಾರ್ ನಡುಪದವು, ಹಂಝ ದೇರಳಕಟ್ಟೆ ಆಶಾ ಕಾರ್ಯಕರ್ತೆಯರಾದ ಪವಿತ್ರ, ವೀಣಾ, ಪೂರ್ಣಿಮ ಶೆಟ್ಟಿ, ಶ್ರೀಮತಿ ಅಸೈಗೋಳಿ ಮತ್ತಿತರರು ಉಪಸ್ಥಿತರಿದ್ದರು.