ದುಬೈ, ಮೇ 30 (DaijiworldNews/PY) : ದುಬೈನಿಂದ ಜೂನ್ 1ರಂದು ಮೊದಲ ಚಾರ್ಟರ್ಡ್ ವಿಮಾನವು ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಹೊರಡಲು ಸಿದ್ದವಾಗಿದೆ.
ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ನ 105 ಸಿಬ್ಬಂದಿ ಚಾರ್ಟರ್ಡ್ ಸ್ಪೈಸ್ ಜೆಟ್ ವಿಮಾನದಲ್ಲಿ ಹಾರಾಟ ನಡೆಸಲಿದ್ದು, ಇದನ್ನು ಹೊಟೇಲ್ ಅಧ್ಯಕ್ಷ ಹಾಗೂ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ (ಕೆಎನ್ಆರ್ಐ) ಅಧ್ಯಕ್ಷ ಪ್ರವೀಣ್ ಶೆಟ್ಟಿ ಏರ್ಪಡಿಸಿದ್ದಾರೆ.
ಈ ವಿಮಾನವು ಬೆಳಿಗ್ಗೆ 9.45 ಕ್ಕೆ ಹೊರಡಲಿದ್ದು, ಒಟ್ಟು 180 ಪ್ರಯಾಣಿಕರನ್ನು ಹೊತ್ತುತರಲಿದೆ ಎಂದು ಭಾರತದ ಕಾನ್ಸುಲ್ ಜನರಲ್ ದುಬೈಗೆ ತಿಳಿಸಿದ್ದಾರೆ ಎಂದು ವಿಫುಲ್ ಹೇಳಿದ್ದಾರೆ.
ಕೊರೊನಾ ವೈರಸ್ ಹಿನ್ನಲೆ ಲಾಕ್ಡೌನ್ ಜಾರಿಯಾದ ಕಾರಣ ಎಲ್ಲಾ ಅಂತರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಯಿತು. ಹಾಗಾಗಿ ಮೇ 26ರಂದು ದುಬೈಯಲ್ಲಿರುವ ಭಾರತೀಯರನ್ನು ಹಿಂತಿರುಗಿಸುವ ಸಲುವಾಗಿ ಚಾರ್ಟರ್ಡ್ ಫ್ಲೈಟ್ಗಳನ್ನು ನಿರ್ವಹಿಸಲು ಸರ್ಕಾರ ಖಾಸಗಿ ಕಂಪನಿಗಳಿಗೆ ಅಧಿಕಾರ ನೀಡಿತು.
ಈ ಬಗ್ಗೆ ವಿಫುಲ್ ಅವರು ಮಾತನಾಡಿದ್ದು, ದುಬೈನಿಂದ ಜೂನ್ 1ರಂದು ನಿಗದಿಯಾದ ವಿಮಾನ ಯುಎಇಯ ಮೊದಲ ವಿಮಾನವಲ್ಲ. ವಂದೇ ಭಾರತ್ ವಿಮಾನಗಳಲ್ಲಿ ಮಾಡಿದ ರೀತಿಯಲ್ಲೇ ಇದನ್ನು ಮಾಡಲಾಗುತ್ತಿರುವುದರಿಂದ ಎಲ್ಲಾ ಪ್ರಯಾಣಿಕರಿಗೆ ಐಜಿಜಿ / ಐಜಿಎಂ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಕೊರೊನಾ ವೈರಸ್ ಆರಂಭವಾದ ಬಳಿಕ ಏಳು ಹೊಟೇಲ್ನಲ್ಲಿ ಮೂರು ಹೊಟೇಲ್ಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸದ ಕಾರಣ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೇ, ಯಾವುದೇ ನೌಕರರ ವೀಸಾಗಳನ್ನು ರದ್ದುಪಡಿಸಲಾಗಲಿಲ್ಲ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ನಂತರ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ದುಬೈನಿಂದ ವಾಪಾಸ್ಸಾಗಿರುವ ಸಿಬ್ಬಂದಿಗಳು ಮಂಗಳೂರು, ಉಡುಪಿ, ಕಾಸರಗೋಡು ಹಾಗೂ ಕುಂದಾಪುರದವರಾಗಿದ್ದಾರೆ.