ಬೆಳ್ತಂಗಡಿ, ಮೇ 30 (DaijiworldNews/SM): ಸೈನಿಕರು ದೇಶದ ಬೆನ್ನೆಲುಬು. ದೇಶ ರಕ್ಷಣೆಗಾಗಿ ದಿನರಾತ್ರಿ ಗಡಿಯಲ್ಲಿ ದುಡಿಯುವವರು. ಈ ನಮ್ಮ ಸೈನಿಕರಿಗೆ ಇದೀಗ ರಜಾ ಸಮಯವಿರುತ್ತದೆ. ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ರಜೆಯಿದ್ದರೂ ಊರಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರದ ವಿವಿಧ ಭಾಗಗಳಲ್ಲಿ ದೇಶ ರಕ್ಷಣೆಗೆ ಜೀವದ ಹಂಗು ತೊರೆದು ಗಡಿಗಳನ್ನು ಕಾಯುವ ಸೈನಿಕರು ತಮ್ಮ ವಾರ್ಷಿಕ ರಜೆಯಲ್ಲಿ ಊರಿಗೆ ಬರುವುದು ಸಹಜ. ಆದರೆ ಕೋವಿಡ್ 19 ಕರೊನಾ ಸೋಂಕಿನ ಕಾರಣದಿಂದ ಹೊರ ರಾಜ್ಯದಿಂದ ಬರುವವರಿಗೆ ನಿಯಾಮವಳಿಗಳಿಂದ ಕುಟುಂಬವನ್ನು ಸೇರಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ರಾಜ್ಯದ ಸೇವಾಸಿಂಧು ಪೋರ್ಟಲ್ ನಲ್ಲಿ ಸೈನಿಕರಿಗೆ ತಮ್ಮ ಹೆಸರನ್ನು ನೊಂದಾಯಿಸಲು ವಿಶೇಷ ಅವಕಾಶವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಸೈನಿಕರಿಗೆ ತಕ್ಷಣ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.