ಭಾರತದ ಬ್ಯಾಂಕುಗಳಿಗೆ ಬಹುಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಮುಂಬಯಿನ ಪ್ಲಾಟ್ ಒಂದರಿಂದ, 12 ಸಾವಿರ ಕೋಟಿ ಪಿ ಎನ್ ಬಿ ಮೋಸದ ಪ್ರಕರಣದಲ್ಲಿ , 26 ಕೋಟಿ ಮೌಲ್ಯದ ಆಭರಣಗಳು, ದುಬಾರಿ ಕೈಗಡಿಯಾರಗಳು ಮತ್ತು ಅಮೃತಾ ಶೆರ್ಗಿಲ್ ಮತ್ತು ಎಮ್.ಎಫ್ ಹುಸೇನ್ ಅವರ ಅಮೂಲ್ಯ ವರ್ಣಚಿತ್ರಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದೊರಕಿರುವ ಕೇವಲ ಒಂದು ಉಂಗುರದ ಮೌಲ್ಯ ಬರೋಬ್ಬರಿ "10ಕೋಟಿ"
ನೀರವ್ ಮೋದಿ ಅವರ, ವರ್ಲಿ ಪ್ರದೇಶದಲ್ಲಿರುವ 'ಸಮುದ್ರ ಮಹಲ್' ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ ಸಂದರ್ಭದಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 26 ಕೋಟಿ ಮೌಲ್ಯದ ಆಭರಣಗಳು, ದುಬಾರಿ ಕೈಗಡಿಯಾರಗಳು ಹಾಗೂ ಅಮೃತಾ ಶೆರ್ಗಿಲ್ ಮತ್ತು ಎಮ್.ಎಫ್ ಹುಸೇನ್ ಅವರ ಅಮೂಲ್ಯ ವರ್ಣಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದೊರೆತ ಒಂದು ಉಂಗುರದ ಮೌಲ್ಯ ಕಂಡು ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ದೇಶದಾದ್ಯಂತ 251 ಸ್ಥಳಗಳನ್ನು ಶೋಧ ನಡೆಸಿ ಇಲ್ಲಿಯವರೆಗೆ, ವಜ್ರಗಳು, ಚಿನ್ನ, ಅಮೂಲ್ಯ ರತ್ನಗಳು ಮತ್ತು ಇತರ ಆಸ್ತಿಗಳನ್ನು ಸೇರಿ 7,638 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.ಸಿಬಿಐ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮತ್ತು ಗೀತಾಂಜಲಿ ಜೇಮ್ಸ್ ಪ್ರವರ್ತಕ ಮೆಹುಲ್ ಚೋಕ್ಸಿಯ ಪರಿಷ್ಕರಣೆಗಾಗಿ ಎರಡು ಎಫ್ಐಆರ್ ಗಳನ್ನು ದಾಖಲಿಸಿದೆ.