ಮಂಗಳೂರು, ಮೇ 31 (DaijiworldNews/PY) : ಖ್ಯಾತ ಸಮಾಜ ಸೇವಕಿ ಹಾಗೂ ಸ್ಕೂಲ್ ಆಫ್ ಸೋಷಿಯಲ್ ವರ್ಕ್ನ ಮಾಜಿ ಪ್ರಾಂಶುಪಾಲೆ ರೋಶ್ನಿ ನಿಲಯ, ಡಾ. ಒಲಿಂಡಾ ಪಿರೇರಾ (95) ಅವರು ಭಾನುವಾರ ನಿಧನರಾದರು.
ಆಗಸ್ಟ್ 15, 1925 ರಂದು ಜನಿಸಿದ ಡಾ. ಒಲಿಂಡಾ ಪಿರೇರಾ ಅವರು , ವಿಶೇಷವಾಗಿ ಹಿರಿಯ ನಾಗರಿಕರಿಗೆ ಹಾಗೂ ವೃದ್ದರ ಆರೈಕೆಗೆ ಸಹಾಯ ಮಾಡುವಲ್ಲಿ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರವರ್ತಕ ಶಿಕ್ಷಣ ತಜ್ಞೆಯಾದ ಇವರು ದೇಶದ ವಿವಿಧ ಭಾಗಗಳಲ್ಲಿ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣದ ಉತ್ತೇಜನಕ್ಕಾಗಿ ಕೆಲಸ ಮಾಡಿದ್ದಾರೆ.
ಮಾರ್ಟಿನ್ ಹಾಗೂ ಲಿಲ್ಲಿ ಅವರ ಮೂರನೇ ಮಗಳಾದ ಡಾ.ಪಿರೇರಾ ಅವರು ಮೈಸೂರಿನ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ, ಮಂಗಳೂರಿನ ಸೈಂಟ್ ಆನ್ಸ್ ಕಾಲೇಜ್ ಆಫ್ ಎಜುಕೇಶನ್ನಿಂದ ಬಿ ಟಿ ಮತ್ತು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಿಂದ (ಮದ್ರಾಸ್ ವಿಶ್ವವಿದ್ಯಾಲಯ) ಬಿ.ಎ. ನಂತರ ಅವರು ಫಿಲ್ಲಿಫೈನ್ಸ್ನ ಮನಿಲಾದ ಇನ್ಸ್ಟಿಟ್ಯೂಟ್ ಆಫ್ ವುಮೆನ್ಸ್ ಸ್ಟಡೀಸ್ನಲ್ಲಿ ಇಂಟರ್ನಿ ಆಗಿದ್ದರು.
ಇವರು ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶ್ನಿ ನಿಲಯದ ಸಂಸ್ಥಾಪಕ ತಂಡದ ಭಾಗವಾಗಿದ್ದು, ಬಳಿಕ 1961 ರಿಂದ 1982ರವರೆಗೆ ಅದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯಾದ ನಂತರ ಇವರು ಇನ್ಸ್ಟಿಟ್ಯೂಟ್ ಫಾರ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಹಾಗೂ ಮಹಿಳಾ ಅಭಿವೃದ್ಧಿ ಕೇಂದ್ರವನ್ನು ಪ್ರಾರಂಭಿಸಲು ದೆಹಲಿಗೆ ತೆರಳಿದ್ದು, 1984 ರಿಂದ 1991ರವರೆಗೆ ದೆಹಲಿಯಲ್ಲಿ ಇದ್ದರು. ನಂತರ ಇದು ನೈರೋಬಿಗೆ ವರ್ಗಾವಣೆಯಾದ ಬಳಿಕ ಅಲ್ಲಿ ಅವರು ಹೊಸ ಪ್ರಾಂತೀಯ ಸದನವನ್ನು ಸ್ಥಾಪಿಸಿದರು.
ಮಂಗಳೂರಿಗೆ ವಾಪಾಸ್ಸಾದ ನಂತರ, ಅವರು 1999ರಲ್ಲಿ ವಿಶ್ವಸ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇದು ವೃದ್ದರಿಗೆ ಮನೆ ಆಧಾರಿತ ಆರೈಕೆಯನ್ನು ನೀಡುತ್ತಿದ್ದು, ಜೊತೆಗೆ ವೃದ್ದರಿಗೆ ದಿನದ ಆರೈಕೆಯ ಕೇಂದ್ರವಾಗಿತ್ತು.
ಇದರೊಂದಿಗೆ ಇವರು ರಾಷ್ಟ್ರೀಯ ಮಹಿಳಾ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು, ಅಂಡರ್ಸ್ಟಾಂಡಿಂಗ್ ಚಿಲ್ಡ್ರನ್ಸ್, ಅಜ್ಡನ್ಟ್ಮೆಂಟ್ ಆಂಡ್ ಇಟ್ಸ್ ಕೊರೊಲೇಶನ್ ಪ್ರಿ ಅಡೋಲೊಸೆಂಟ್ಸ್, ಡೊಮೆಸ್ಟಿಕ್ ವರ್ಕರ್ಸ್ ಹಾಗೂ ಸ್ಟ್ರಗಲ್ ಎನ್ನುವ ಪುಸ್ತಕಗಳನ್ನು ಬರೆದಿದ್ದಾರೆ . ಅಲ್ಲದೇ, ನಗರ ಸಮುದಾಯ ಅಭಿವೃದ್ದಿ ಕೇಂದ್ರ, ಕುಟುಂಬ ಕಲ್ಯಾಣ ಸಂಸ್ಥೆ, ಉಳ್ಳಾಲದಲ್ಲಿ ಶಿಶುವಿಹಾರ ಹಾಗೂ ಮಂಗಳೂರಿನಲ್ಲಿ ಅನೇಕ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ.
ಇವರು, 1979 ರಲ್ಲಿ ಹ್ಯಾಮಿಲ್ಟನ್ನ ಮ್ಯಾಕ್ಮಾಸ್ಟರ್ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ, 1997 ರಲ್ಲಿ ಸೈಂಟ್ ಆಗ್ನೆಸ್ ಕಾಲೇಜಿನಿಂದ ಮಹಿಳಾ ಸಾಧಕ ಪ್ರಶಸ್ತಿ, 2002 ರಲ್ಲಿ ಸಾಮಾಜಿಕ ಸೇವೆಗಾಗಿ ಸಂದೇಶ ಪ್ರಶಸ್ತಿ, 2008 ರಲ್ಲಿ ರಚನಾ ವರ್ಷದ ಮಹಿಳೆ, ವೀರ ರಾಣಿ ಅಬ್ಬಕ್ಕ ಪ್ರಶಸ್ತಿ (ಸಾಮಾಜಿಕ ಸೇವೆಗಾಗಿ) ಹಾಗೂ 2015-16 ಕರವಾಲಿ ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.