ಮಂಗಳೂರು, ಮೇ 31 (DaijiworldNews/PY) : ಮುಂಬೈನಿಂದ ಬಂದ ಬೋಳಿಯಾರು ವ್ಯಕ್ತಿಗೆ ನಿನ್ನೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ದೇರಳಕಟ್ಟೆ ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ನಲ್ಲಿರಿಸಲಾಗಿತ್ತು. ಆದರೆ, ವರದಿ ಬರುವುದಕ್ಕೂ ಮೊದಲೇ ವ್ಯಕ್ತಿಯನ್ನು ಮನೆಗೆ ಕಳುಹಿಸಿದ್ದು, ಜಿಲ್ಲಾಡಳಿತದ ಎಡವಟ್ಟಿಗೆ ಇಡೀ ಗ್ರಾಮಕ್ಕೆ ಆತಂಕ ಶುರುವಾಗಿದೆ.
ಮಂಗಳೂರು ತಾಲೂಕಿನ ಬೋಳಿಯಾರು ಗ್ರಾಮ ವ್ಯಕ್ತಿಯೋರ್ವ ಮುಂಬೈನಿಂದ ವಾಪಾಸ್ಸಾಗಿದ್ದ. ಆತನನ್ನು ದೇರಳಕಟ್ಟೆ ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ನಲ್ಲಿರಿಸಲಾಗಿತ್ತು. ಆದರೆ, ಆತನ ವರದಿ ಬರೋದಕ್ಕೂ ಮೊದಲೇ ಆತನನ್ನು ಮನೆಗೆ ಕಳುಹಿಸಿದ್ದರು.
ನಿನ್ನೆ ಆತನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ನಿನ್ನೆ ಮನೆಯಿಂದ ಮತ್ತೆ ಸೋಂಕಿತನನ್ನು ವೆನ್ಲಾಕ್ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಸೋಂಕಿತ ಇಡೀ ಗ್ರಾಮದಲ್ಲಿ ಓಡಾಡಿದ್ದ, ಅಲ್ಲದೇ ಇಡೀ ಕುಟುಂಬದ ಜೊತೆಗೆ ಇದ್ದ ಎಂದು ಹೇಳಲಾಗಿದ್ದು, ಈ ಕಾರಣದಿಂದ ಬೋಳಿಯಾರು ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.