ಕಾರ್ಕಳ, ಮೇ 31 (DaijiworldNews/SM): ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಯುವಕನೋರ್ವನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದಿರುವ ವ್ಯಕ್ತಿ ಹೆಬ್ರಿಯಲ್ಲಿ ಕ್ವಾರೆಂಟೈನ್ ನಲ್ಲಿದ್ದರು. ಕ್ವಾರಾಂಟೈನ್ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಇನ್ನಾ ಗ್ರಾಮದಲ್ಲಿನ ತನ್ನ ಮನೆಗೆ ಮರಳಿದ್ದರು.
ಕೋವಿಡ್ ಪರೀಕ್ಷೆಯ ವರದಿ ಜಿಲ್ಲಾಡಳಿತದ ಕೈ ಸೇರುವ ಮೊದಲೇ ಕ್ವಾರೆಂಟೈನ್ ನಿಂದ ಆ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗಿದ್ದು ಇದೀಗ ವರದಿ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ ಈತನಿಗೆ ಕೊರೊನಾ ಪಾಸಿಟಿವ್ ಇರುವ ಬಗ್ಗೆ ದೃಢಪಟ್ಟಿದ್ದು, ಆ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.