ಕಾಸರಗೋಡು, ಮೇ 31 (DaijiworldNews/SM): ಮಹಾರಾಷ್ಟ್ರದಿಂದ ಬಂದ ಹತ್ತು ಮಂದಿಗೆ ಆದಿತ್ಯವಾರ ಜಿಲ್ಲೆಯಲ್ಲಿ ಕೋವಿಡ್ ದ್ರಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಮಂಗಲ್ಪಾಡಿ ನಾಲ್ಕು, ಪೈವಳಿಕೆ, ಮಧೂರು ತಲಾ ಎರಡು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್, ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ಮೊಗ್ರಾಲ್ ಪುತ್ತೂರು ನಿವಾಸಿ 59 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ 43, 40 ವರ್ಷದ ವ್ಯಕ್ತಿಗಳು, ಕಾಸರಗೋಡು ನಗರಸಭೆ ನಿವಾಸಿ 30 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿಗಳಾದ 64, 27, 23, 51 ವರ್ಷದ ವ್ಯಕ್ತಿಗಳು, ಮಧೂರು ಗ್ರಾಮ ಪಂಚಾಯತ್ ನ 23, 27 ವರ್ಷದ ವ್ಯಕ್ತಿಗಳು ರೋಗ ಬಾಧಿತರಗಿದ್ದಾರೆ. ಇನ್ನು ಈ ನಡುವೆ ಮೇ 20ರಂದು ರೋಗ ಖಚಿತಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತ್ರಿಕರಿಪುರ ನಿವಾಸಿ ಗುಣಮುಖರಾಗಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 3691 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3083 ಮಂದಿ, ಆಸ್ಪತ್ರೆಗಳಲ್ಲಿ 608 ಮಂದಿ ನಿಗಾದಲ್ಲಿದ್ದಾರೆ. ನೂತನವಾಗಿ ಆಸ್ಪತ್ರೆಗಳಲ್ಲಿ ಮತ್ತು ಮನೆಗಳಲ್ಲಿ 322 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಭಾನುವಾರ ನೂತನವಾಗಿ 226 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 226 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.