ಮಂಗಳೂರು, ಜೂ 01 (Daijiworld News/MSP): ಕೋವಿಡ್ 19 ನಿಂದ ಲಾಕ್ ಡೌನ್ ಆದ ಪರಿಣಾಮ ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಅಂದಾಜು 600 ಕೋಟಿ ನಷ್ಟವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಲ್ಲೂರು ದೇವಾಲಯವೊಂದರಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ14 ಕೋಟಿ ನಷ್ಟವಾಗಿದೆ . ಎಲ್ಲಾ ದೇವಸ್ಥಾನ ಮುಚ್ಚಿದ ಪರಿಣಾಮ ಈ ನಷ್ಟವಾಗಿದೆ. ಎ ದರ್ಜೆ ಮತ್ತು ಬಿ ದರ್ಜೆ ದೇವಸ್ಥಾನಗಳಲ್ಲಿ ವಾರ್ಷಿಕ ಶೇಕಡ 35 ರಷ್ಟು ಆದಾಯ ಕಡಿಮೆಯಾಗಿದೆ ಎಂದು ತಿಳಿಸಿದರು.
ಲಾಕ್ ಡೌನ್ ಆದಾಗ ಮೊದಲು ಬೀಗ ಮುದ್ರೆ ಬಿದ್ದಿದ್ದೇ ಧಾರ್ಮಿಕ ಸ್ಥಳಗಳಿಗೆ ಇದರ ಪರಿಣಾಮ ಮಾತ್ರ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟವಾಗಿದೆ. ಲಕ್ಷಾಂತರ ಭಕ್ತರು ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆಯ ಸಂದರ್ಭದಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳುವುದು ವಾಡಿಕೆ. ಇದೇ ಕಾರಣಕ್ಕೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳು ದೇವಸ್ಥಾನಗಳಿಗೆ ಅತೀ ಹೆಚ್ಚು ಆದಾಯ ತಂದುಕೊಡುತ್ತಿದ್ದ ಸಮಯವಾಗಿತ್ತು. ಆದರೆ ಈ ಬಾರಿ ಮತ್ತು ಇದೇ ಮೊದಲ ಬಾರಿ ಇಷ್ಟು ದೀರ್ಘಕಾಲದ ವರೆಗೆ ರಾಜ್ಯದ ಎಲ್ಲಾ ದೇವಸ್ಥಾಗಳಿಗೂ ಬೀಗ ಬಿದ್ದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಅಂದಾಜು 600 ಕೋಟಿ ನಷ್ಟವಾಗಿದೆ.