ಮಂಗಳೂರು,ಮಾ25: ಬಿರುವೆರ್ ಕುಡ್ಲ ಸಂಸ್ಥೆಯು ಜಿಲ್ಲೆಯ ಜನರಿಗೆ ಮಾದರಿ ಸಂಸ್ಥೆಯಾಗಿ ಬೆಳೆಯಲಿದೆ.ಕಳೆದ ಮೂರು ವರ್ಷದಲ್ಲಿ 60 ಲಕ್ಷಕ್ಕೂ ಮಿಕ್ಕಿ ಬಡ ವರ್ಗದ ಜನರಿಗೆ ಚಿಕಿತ್ಸಾ ವೆಚ್ಚ, ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ ಎಂದು ಮಂಗಳೂರು ಸಿಸಿಬಿ ಇನ್ಸ್ಫೆಕ್ಟರ್ ಶಾಂತಾರಾಮ್ ಕುಂದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಕಳೆದ ಹಲವು ತಿಂಗಳಿನಿಂದ ಲುಕ್ಯೇಮಿಯಾ ರೋಗದಿಂದ ಬಳಲುತ್ತಿರುವ ೨ರ ಹರೆಯದ ಬಾಲಕಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ಕೊಡಲ್ಪಟ್ಟ ಒಂದು ಲಕ್ಷ ರೂಪಾಯಿಯ ಚೆಕ್ ವಿತರಿಸಿ ಅವರು ಮಾತನಾಡಿದ್ರು.
ಬಿರುವೆರ್ ಕುಡ್ಲ ಸಂಘಟನೆಯು ಎಲ್ಲಾ ಜಾತಿ, ಧರ್ಮದ ಜನರನ್ನು ಒಟ್ಟುಗೂಡಿಸಿ ಸಮಾನ ನ್ಯಾಯಪರವಾಗಿ ಕೆಲಸ ಮಾಡಿ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಈ ಸಂಸ್ಥೆ ಮಾಡುವ ಉತ್ತಮ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ನಾವೂ ಕೈ ಜೋಡಿಸಲಿದ್ದೇವೆ ಎಂದು ನಿಕಟ ಪೂರ್ವ ಮೇಯರ್ ಕವಿತಾ ಸನೀಲ್ ಹೇಳಿದ್ರು.
ಈ ವೇಳೆ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್ , ಉದ್ಯಮಿ ಸೂರಜ್ ಕುಮಾರ್ ಕಲ್ಯ, ಉದ್ಯಮಿ ರಘುರಾಂ ಶೆಟ್ಟಿ ಮುಂಬೈ,ಸದಾನಂದ ಪೂಜಾರಿ, ಬಾಬಾ ಅಲಂಕಾರ್,ಗೌರವಾಧ್ಯಕ್ಷ ಪ್ರಮೋದ್ ಬಳ್ಳಾಲ್ ಬಾಗ್, ಸ್ಥಾಪಕ ಸದಸ್ಯ ಅಭಿಷೇಕ್ ಅಮೀನ್ ಬಿಕರ್ನಕಟ್ಟೆ, ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಲತೀಶ್ ಪೂಜಾರಿ,ಸುಹಾನ್ ಪೂಜಾರಿ, ಪ್ರದೀಪ್ ಬೈಕಂಪಾಡಿ,ವಿನುಶೆಟ್ಟಿ ತಲಪಾಡಿ,ಓಝಿ ಪದವಿನಂಗಡಿ, ರಾಕೇಶ್ ಚಿಲಿಂಬಿ,ಗಣೇಶ್ ಚಿಲಿಂಬಿ,ಮಹೇಶ್ ಅಶೋಕನಗರ,ರೋಶನ್ ಮಿನೇಜಸ್,ರಿನಿತ್ ಅಶೋಕನಗರ, ಕಿಶೋರ್ ಬಾಬು ಕೋಡಿಕಲ್, ಯತೀಶ್ ಬಳ್ಳಾಲ್ ಬಾಗ್, ಲೋಹಿತ್ ಗಟ್ಟಿ, ಬಾಲಕಿ ಪೋಷಕರು ಉಪಸ್ಥಿತರಿದ್ದರು.