ಕಾಸರಗೋಡು, ಜೂ 01(DaijiworldNews/SM): ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಸೇರಿದಂತೆ ಸೋಮವಾರ 14 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 12 ಮಂದಿ ಮಹಾರಾಷ್ಟ್ರದಿಂದ ಹಾಗೂ ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ.
ಕುಂಬಳೆ 3, ಮೀ೦ಜ 3, ಮಂಗಲ್ಪಾಡಿ 2 , ಚೆಮ್ನಾಡ್ , ಬದಿಯಡ್ಕ , ಪೈವಳಿಕೆ , ಮಧೂರು , ಚೆರ್ವತ್ತೂರು , ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಮೇ 18ರಂದು ಖತಾರ್ ನಿಂದ ಬಂದಿದ್ದ ಮಧೂರು ನಿವಾಸಿ ಮತ್ತು ಖತಾರ್ ನಿಂದ ಆಗಮಿಸಿದ್ದ ಕುಂಬಳೆಯ ಮೂರು ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ. ಬಾಲಕಿಯ ತಂದೆಗೆ ಈ ಹಿಂದೆ ಸೋಂಕು ದೃಢಪಟ್ಟಿತ್ತು. ಇಬ್ಬರು ಮೇ 28ರಂದು ಖತಾರ್ ನಿಂದ ಆಗಮಿಸಿದ್ದರು. ಉಳಿದ 14 ಮಂದಿ ಬಸ್ಸು ಮತ್ತು ಇತರ ವಾಹನಗಳಲ್ಲಿ ಮಹಾರಾಷ್ಟದಿಂದ ಕಾಸರಗೋಡಿಗೆ ಆಗಮಿಸಿದವರಾಗಿದ್ದಾರೆ.