ಕಾಸರಗೋಡು, ಜೂ 02 (Daijiworld News/MSP): ಇನ್ನೋವಾ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಆರು ಕಿಲೋ ಗಾಂಜಾ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ತಲಶ್ಯೇರಿ ಯ ಹರ್ಷಾದ್ ( 20), ಸೀತಾಂಗೋಳಿ ಮುಗು ವಿನ ಮುಹಮ್ಮದ್ ಶರೀಫ್ ( 20) ಮತ್ತು ತಲಶ್ಯೇರಿ ಧರ್ಮಡ ದ ಸಲ್ಮಾನ್ ಮಿನಿಶಾದ್ (22) ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ಕುಂಬಳೆ ಪೇಟೆಯಲ್ಲಿ ಗಸ್ತು ತಿರುಗುತ್ತಿದ್ದ ಕುಂಬಳೆ ಠಾಣಾ ಎ ಎಸ್ ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಮೂವರನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದೆ. ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಇನ್ನೋವಾ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.