ಮಂಗಳೂರು, ಜೂ. 02 (Daijiworld News/MB) : ದೇರಳಕಟ್ಟೆ ಬಿಎಸ್ಎನ್ಎಲ್ ಉಪ ಕೇಂದ್ರದ ಸರ್ವರ್ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಇದರಿಂದಾಗಿ ಸುಮಾರು ನಾಲ್ಕು ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಉಪಕೇಂದ್ರದಲ್ಲಿನ ಸರ್ವರ್ ರೂಂನಲ್ಲಿ ಕೂಲಿಂಗ್ ವ್ಯವಸ್ಥೆಯ ತಾಂತ್ರಿಕ ತೊಂದರೆಯಿಂದ ಉಷ್ಣತೆ ಹೆಚ್ಚಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಂಶಯಿಸಲಾಗಿದ್ದು ರಾತ್ರಿಯ ಸಂದರ್ಭದಲ್ಲಿ ಸಿಬ್ಬಂದಿಗಳು ಇಲ್ಲದೆ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬಿಎಸ್ಎನ್ಎಲ್ ಉಪಕೇಂದ್ರ ಅವಘಡದಿಂದ ಸ್ಥಳೀಯ ಬ್ಯಾಂಕ್ ಆಸ್ಪತ್ರೆಗಳ ಸರ್ವರ್, ಇಂಟರ್ ನೆಟ್ ಸೇರಿದಂತೆ ಸ್ಥಿರ ದೂರವಾಣಿ ಸ್ಥಗಿತಗೊಂಡಿದೆ.