ಉಡುಪಿ, ಜೂ 02 (Daijiworld News/MSP): ಜನವರಿ ತಿಂಗಳಿನಲ್ಲಿ ಹೂಳೆತ್ತುವ ಕಾಮಾಗಾರಿಯ ಟಂಡರ್ ಅವಧಿ ಮುಗಿದಿದೆ ಎಂದು ತಿಳಿದ ಮೇಲೆ ಕೂಡಾ ಪ್ರಮೋದ್ ಮಧ್ವರಾಜ್ ಏಕೆ ಮೌನವಾಗಿ ಕುಳಿತಿದ್ದರು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯರಾದ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಸ್ವರ್ಣ ನದಿಯ ಹೂಳೆತ್ತುವ ಕಾಮಗಾರಿಯ ಟೆಂಡರ್ ಅವಧಿ ಮುಗಿದ ನಂತರ ಕಳೆದ 5 ತಿಂಗಳಿನಿಂದ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತಿತ್ತು ಎಂಬ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅವರು " ಜನವರಿಯಲ್ಲಿ ಟೆಂಡರ್ ಮುಗಿದ ನಂತರ ಆ ನದಿ ಪಾತ್ರವನ್ನು ನೋಡುವಂತ ಜವಬ್ದಾರಿ ಗಣಿ ಇಲಾಖೆ ಮತ್ತು ಜಿಲ್ಲಾಡಳಿತದ್ದೇ ಹೊರತು ಬಿಜೆಪಿ ಪಕ್ಷದ್ದು ಅಲ್ಲ. ಭಾರತೀಯ ಜನತಾ ಪಾರ್ಟಿ ನದಿ ಪಾತ್ರಕ್ಕೆ ಬೇಲಿ ಕಟ್ಟಿ ಕಾಯಲು ಆಗುವುದಿಲ್ಲ. ಅಲ್ಲಿಗೆ ಹೋಗುವ ಎಲ್ಲಾ ರಸ್ತೆಗಳು ತೆರೆದಿದ್ದು ಕಳೆದ ಹಲವಾರು ಸಮಯಗಳಿಂದ ಅಲ್ಲಿನ ಜನರು ಮರಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಮೋದ್ ಮಧ್ವರಾಜ್ ಹೇಳುವುದು ವಾಸ್ತವಕ್ಕೆ ದೂರವಾದ ವಿಚಾರ. ಕಾನೂನು ಬದಲಾವಣೆ ಆಗಿದೆಯೇ ಹೊರತು ಇಂದಿಗೂ ಅಲ್ಲಿ ಮರಳನ್ನು ಕೊಂಡು ಹೋಗುತಿದ್ದಾರೆ. ಪ್ರಮೋದ್ ಮಧ್ವರಾಜ್ ತನಿಖೆಗೆ ಆಗ್ರಹಿಸಿದ್ದು ತನಿಖೆಗೆ ಭಾರತೀಯ ಜನತಾ ಪಾರ್ಟಿ ಕೂಡಾ ಬೆಂಬಲ ನೀಡುತ್ತೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಬಿಜೆಪಿ ಕೂಡಾ ಆಗ್ರಹಿಸುತ್ತಿದೆ. ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಕುಳಿತು ವೃಥಾ ಆರೋಪ ಮಾಡಬಾರದು. 60 ದಿನ ಮನೆಯಲ್ಲಿ ಕೂತು ಈಗ ಪ್ರಮೋದ್ ಮಧ್ವರಾಜ್ ಮಾತನಾಡುವುದು ಸರಿಯಲ್ಲ ಎಂದರು
ವಿದೇಶಿ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸಿ ಭಾರತೀಯ ಉತ್ಪನ್ನಗಳನ್ನು ಖರೀದಿಸಿ ಬಾರತೀಯ ರುಪಾಯಿಯನ್ನು ಬಲಪಡಿಸಬೇಕು ಹಾಗೂ ಬಿಜೆಪಿಯ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕಿಸಿ ಸ್ವಾವಲಂಬಿ ಬಾರತ ಆಗುವ ನಿಟ್ಟಿನಲ್ಲಿ ಜಾಗೃತಿ ಕಾರ್ಯವನ್ನು ಕೂಡಾ ನಡೆಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ತಮ್ಮ ಮನೆಯಲ್ಲಿರುವ ವಿದೇಶಿ ವಸ್ತುಗಳನ್ನು ಮಾರಾಟ ಮಾಡಿ ಭಾರತೀಯ ವಸ್ತುಗಳನ್ನು ಖರೀದಿ ಮಾಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.