ಮಂಗಳೂರು, ಜೂ 02 (Daijiworld News/MSP): ಕೊರೊನಾ ಸಾಂಕ್ರಮಿಕ ರೋಗದಿಂದ ದ.ಕ.ಜಿಲ್ಲೆಯಲ್ಲಾಗಿರುವ ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲಾಡಳಿತ ಮತ್ತು ಸರಕಾರದಿಂದ ನಡೆಯಬೇಕಾದ ಕಾರ್ಯಯೋಜನೆಗಳ ಬಗ್ಗೆ ಶಾಸಕ ಯು.ಟಿ.ಖಾದರ್ ನೇತೃತ್ವದ ಕಾಂಗ್ರೆಸ್ ನಿಯೋಗವೂ ಜೂ ೨ ರ ಮಂಗಳವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿ ಚರ್ಚೆ ನಡೇಸಿದರು.
ಅನ್ಯರಾಜ್ಯ, ಹೊರದೇಶದಲ್ಲಿರುವ ಜನರನ್ನು ಕರೆದುಕೊಂಡು ಬರಬೇಕು. ಬಳಿಕ ಸೂಕ್ತ ತಪಾಸಣೆ ನಡೆಸಿ ಕ್ವಾರಂಟೈನ್ ನಲ್ಲಿ ಇರಿಸಬೇಕು. ನೆಗೆಟಿವ್ ವರದಿ ಬಂದ ಬಳಿಕವೇ ಮನೆಗೆ ಕಳುಹಿಸುವ ವ್ಯವಸ್ಥೆಯಾಗಬೇಕು . ಖಾಸಗಿ ವಿಮಾನದ ಮೂಲಕ ಭಾರತಕ್ಕೆ ಬರುವವರಿಗೆ ಪರವಾನಿಗೆ ನೀಡಲಿಬೇಕು. ಕಾಸರಗೋಡು- ದ.ಕ.ಜಿಲ್ಲೆ ಗಡಿ ತೆರೆಯಲಿ. ವೆನ್ಲಾಕ್ ಕೋವಿಡ್ ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಕೋವಿಡ್ ಹೊರತಾದ ರೋಗಕ್ಕೆ ಆಸ್ಪತ್ರೆ ಮರು ತೆರೆಯುವಂತಾಗಲಿ ಎಂದು ಸಲಹೆ ನೀಡಿ ಸಚಿವರ ಗಮನ ಸೆಳೆದರು.
ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕಾರ್ಯಯೋಜನೆ ಕೈಗೊಳ್ಳಲಾಗುದು. ಕಾಸರಗೋಡು ಗಡಿ ಸಮಸ್ಯೆಯ ಬಗ್ಗೆ ಈಗಾಗಲೇ ರಾಜ್ಯ ಸರಕಾರದ ಕಾರ್ಯದರ್ಶಿಯವರಲ್ಲಿ ಮಾತನಾಡಿದ್ದು, ಇಂದು ಸಂಜೆಯೊಳಗೆ ಸಮಸ್ಯೆ ಬಗಹರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಐವನ್ ಡಿಸೋಜ, ಹರೀಶ್ ಕುಮಾರ್, ಮಿಥುನ್ ರೈ, ಶುಭೋದಯ ಆಳ್ವ, ಪ್ರಸಾದ್ ಕಾಂಚನ್, ಸದಾಶಿವ ಉಳ್ಳಾಲ ಕಾಂಗ್ರೆಸ್ ನಿಯೋಗದಲ್ಲಿದ್ದರು.