ಕಾಸರಗೋಡು, ಜೂ 02 (DaijiworldNews/SM): ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 9 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಏಳು ಮಂದಿ ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರ ದಿಂದ ಬಂದ ನಾಲ್ವರು, ಕುವೈಟ್ ನಿಂದ ಬಂದ ಮೂವರು, ಚೆನ್ನೈ ನಿಂದ ಬಂದ ಓರ್ವ ಅಲ್ಲದೆ ಸೋಂಕಿತರ ಸಂಪರ್ಕದಿಂದ ಓರ್ವ ನಲ್ಲಿ ಕೊರೊನಾ ದೃಢಪಟ್ಟಿದೆ. ಕುಂಬಳೆ, ಅಜನೂರು ತಲಾ ಎರಡು, ಪುತ್ತಿಗೆ, ಪಡನ್ನ, ಕುಂಬ್ಡಾಜೆ, ಪಳ್ಳಿಕೆರೆ, ಕಿನಾನೂರು ಕರಿಂದಲ ಪಂಚಾಯತ್ ವ್ಯಾಪ್ತಿಯ ತಲಾ ಒಬ್ಬರಲ್ಲಿ ಸೋಂಕು ದ್ರಢಪಟ್ಟಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಪುತ್ತಿಗೆ ಗ್ರಾಮಪಂಚಾಯತ್ ನ 62 ಹರೆಯದ, ಪಡನ್ನದ 60 ವರ್ಷದ, ಕುಂಬ್ಡಾಜೆಯ 41 ವರ್ಷದ ನಿವಾಸಿ, ಕುಂಬಳೆಯ 32 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಕುವೈತ್ ನಿಂದ ಆಗಮಿಸಿದ್ದ ಕುಂಬಳೆಯ 43 ವರ್ಷದ ವ್ಯಕ್ತಿ, ಅಜಾನೂರಿನ 47 ವರ್ಷದ ಮತ್ತು ಇವರ 7 ವರ್ಷದ ಪುತ್ರನಿಗೆ ಸೋಂಕು ದೃಢಪಟ್ಟಿದೆ.
ಚೆನೈಯಿಂದ ಆಗಮಿಸಿದ್ದ ಪಳ್ಳಿಕ್ಕರೆ 20 ವರ್ಷದ ಪಳ್ಳಿಕೆರೆಯ ಯುವಕನಿಗೆ ಸೋಂಕು ತಗಲಿದೆ. ಸಂಪರ್ಕದಿಂದ ಕಿನಾನೂರು ಕರಿಂದಲದ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಏಳು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪೈವಳಿಕೆಯ ಮೂವರು, ಕುಂಬಳೆಯ ಮೂವರು ಮತ್ತು ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜಿಲ್ಲೆಯಲ್ಲಿ 3876 ಮಂದಿ ನಿಗಾದಲ್ಲಿದ್ದು, 655 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.