ಉಳ್ಳಾಲ, ಜೂ 02 (DaijiworldNews/SM): ಕೋವಿಡ್-19 ಮುಂಜಾಗ್ರತಾ ಕ್ರಮದ ಆದೇಶವನ್ನು ಉಲ್ಲಂಘಿಸಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಂಡು ತಲಪಾಡಿ, ಕೊಣಾಜೆ, ಉಳ್ಳಾಲ ಕಡೆಗೆ ಚಲಿಸುವ ಸುಮಾರು 15 ರಷ್ಟು ಬಸ್ಸುಗಳ ಮೇಲೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಜೆಪ್ಪು ನೇತ್ರಾವತಿ ಸೇತುವೆ ಬಳಿ ಮತ್ತು ನಾಟೆಕಲ್ ಸಮೀಪ ದಂಡ ಪಡೆದುಕೊಂಡಿದ್ದಾರೆ.
ಅಂತರ ಕಾಯ್ದುಕೊಂಡು, 30-35 ಪ್ರಯಾಣಿಕರು ಮಾತ್ರ ಮಾಸ್ಕ್ ಧರಿಸಿ ಪ್ರಯಾಣಿಸಬೇಕು ಅನ್ನುವ ಆದೇಶವನ್ನು ಪಾಲಿಸಿ ಖಾಸಗಿ ಬಸ್ಸು ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ನಿಯಮಿತ ಬಸ್ಸುಗಳು ಮಾತ್ರ ರಸ್ತೆಗಿಳಿದರೂ ಸಂಜೆ ಮತ್ತು ಬೆಳಗ್ಗಿನ ಹೊತ್ತಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಬೆಳಗ್ಗಿನ ಸಂದರ್ಭ ಸಂಚಾರಿ ಠಾಣಾ ಪೊಲೀಸರು ತೊಕ್ಕೊಟ್ಟು ಭಾಗದಿಂದ ಬರುವ ಬಸ್ಸುಗಳನ್ನು ಪಂಪ್ ವೆಲ್ ಬಳಿ ನಿಲ್ಲಿಸಿ ಹೆಚ್ಚುವರಿ ಪ್ರಯಾಣಿಕರು ಇರುವವರನ್ನು ಇಳಿಸಿದರು.
ಸಂಜೆ ಹೊತ್ತಿಗೆ ಜೆಪ್ಪು ಸೇತುವೆ ಮತ್ತು ನಾಟೆಕಲ್ ಬಳಿ 15 ರಷ್ಟು ಖಾಸಗಿ ಬಸ್ಸುಗಳನ್ನು ತಡೆದು ಅಧಿಕ ಪ್ರಯಾಣಿಕರು ಇರುವ ಬಸ್ ಗಳಿಗೆ ದಂಡ ವಿಧಿಸಿದರು. ನಾಗುರಿ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್-4 ಮತ್ತು ಹೈವೇ ಪ್ಯಾಟ್ರಲ್-6 ತಂಡ ಕಾರ್ಯಾಚರಣೆ ನಡೆಸಿತು.