ಮಂಗಳೂರು, ಜೂ 02 (DaijiworldNews/SM): ಒಂದೆಡೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿರಂತರವಾಗಿ ಜಿಲ್ಲೆಯನ್ನು ಕಾಡುತ್ತಿದೆ. ಈ ನಡುವೆ ದ.ಕ. ಜಿಲ್ಲೆಯಲ್ಲಿ ಸ್ವಲ್ಪ ನಿಯಂತ್ರಣದಲ್ಲಿದೆ. ಮಂಗಳವಾರದಂದು ದ.ಕ. ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ಲಭ್ಯವಾಗಿದೆ. ಈ ದಿನ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಮಂಗಳವಾರ ಲಭ್ಯವಾದ ಎಲ್ಲಾ 113 ಮಂದಿಯ ವರದಿಗಳು ನೆಗೆಟಿವ್ ಆಗಿದೆ.
ಸೋಮವಾರದಂದು ದ.ಕ. ಜಿಲ್ಲೆಯಲ್ಲಿ ನಾಲ್ವರಲ್ಲಿ ಸೋಂಕು ಪತ್ತೆಯಾಗಿತ್ತು. ಆರಂಭದಲ್ಲಿ ಸೋಂಕಿನ ಮೂಲದ ಬಗ್ಗೆ ಸ್ವಲ್ಪಗೊಂದಲವಿತ್ತು. ಆದರೆ, ಜಿಲ್ಲಾಡಳಿತ ಸೋಂಕಿನ ಮೂಲ ಪತ್ತೆ ಹಚ್ಚಿದೆ. ಆದರೆ, ಮಂಗಳವಾರದಂದು ದ.ಕ. ಜಿಲ್ಲೆಯ ಜನತೆ ಆತಂಕಗೊಳ್ಳುವಂತಹ ಯಾವುದೇ ವರದಿಗಳಿಲ್ಲ. ಜಿಲ್ಲೆಯಲ್ಲಿ ಪರೀಕ್ಷೆಯ ಬಳಿಕ ಲಭ್ಯವಾದ ಎಲ್ಲಾ 113 ಮಂದಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ.