ಸುಳ್ಯ, ಜೂ 02 (DaijiworldNews/SM): ತಾಲೂಕಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡ ಸುಮಾರು ಐವತ್ತಕ್ಕೂ ಅಧಿಕ ಮಂದಿಗೆ ಹೋಂ ಕ್ವಾರಂಟೈನ್ ವಿಧಿಸಿರುವ ಘಟನೆ ನಡೆದಿದೆ.
ಮಲೆಷಿಯಾದಿಂದ ಬಂದು ಮಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನಲ್ಲಿದ್ದ ಕೊರೊನೊ ಪಾಸಿಟಿವ್ ವ್ಯಕ್ತಿ ಅರಂತೋಡು ತನ್ನ ಸಂಬಂಧಿಕರ ಮನೆಗೆ ಬಂದ ಹಿನ್ನಲೆಯಲ್ಲಿ ಮದುವೆ ಸಮಾರಂಬವೊಂದಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದ ೫೨ಕ್ಕೂ ಅಧಿಕ ಮಂದಿಗೆ ಹೋಮ್ ಕ್ವಾರಂಟೈನಲ್ಲಿರಲು ಸೂಚಿಸಲಾಗಿದೆ.
ಮಲೇಷಿಯದಲ್ಲಿದ್ದ ವೈದ್ಯ ತನ್ನ ಅರಂತೋಡು ಗ್ರಾಮದ ಸಂಬಂಧಿಕರ ಮನೆಗೆ ಭಾನುವಾರದಂದು ಬಂದಿದ್ದರು. ಬಳಿಕ ಆ ಮನೆಯ ಯಜಮಾನ ತನ್ನ ಕಾರಿನಲ್ಲಿ ನಾಲ್ಕು ಜನರೊಂದಿಗೆ ಅರಂತೋಡಿನ ಮದುವೆ ಮನೆಯೊಂದಕ್ಕೆ ತೆರಳಿದ್ದರು. ಇದೀಗ ಈ ವೈದ್ಯರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎರಡು ಮನೆಯವರಿಗೆ ಹಾಗೂ ವೈದ್ಯ ಬೇಟಿ ನೀಡಿದ ಮನೆಗೆ ಮದುವೆ ತೆರಳಿದ್ದ ನಾಲ್ಕು ಮಂದಿಗೆ ಹೋಮ್ ಕ್ವಾರಂಟೈನ್ನಲ್ಲಿರಲು ಭಾನುವಾರವೇ ಸೂಚಿಸಲಾಗಿತ್ತು.
ಸೋಮವಾರ ಐದು ಮಂದಿ ಮದುವೆಗೆ ಹೋಗಿದ್ದ ಸಮಯದಲ್ಲಿ ಮದುವೆ ಮನೆಯಲ್ಲಿದ್ದ ಎಲ್ಲರನ್ನು ಪತ್ತೆ ಹಚ್ಚಿ ವಿಳಾಸ ಕಂಡು ಹಿಡಿದು ಸುಮಾರು ೫೨ಕ್ಕೂ ಅಧಿಕ ಮಂದಿಗೆ ಹೋಮ್ ಕ್ವಾರಂಟೈನ್ಲ್ಲಿರಲು ಸೂಚಿಸಲಾಗಿದೆ ಎಂದು ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ತಿಳಿಸಿದ್ದಾರೆ.