ಉಳ್ಳಾಲ, ಮಾ 26 : ಜಪ್ಪಿನಮೊಗರು ಉಳ್ಳಾಲ ನೇತ್ರಾವತಿ ನದಿಯಲ್ಲಿ ಈಜಲೆಂದು ಗೆಳೆಯರೊಂದಿಗೆ ಹೋಗಿದ್ದ ಮೂಡಬಿದ್ರೆಯ ಜೋಯಲ್ ಡಿಸೋಜ(26) ಅವರ ಮೃತದೇಹ ಪತ್ತೆಯಾಗಿದೆ. ನೀರು ಪಾಲದ ಸ್ವಲ್ಪ ದೂರದಲ್ಲಿ ಇವರ ಮೃತದೇಹ ಮದ್ಯಾಹ್ನ 1.30ರ ವೇಳೆಗೆ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವವನ್ನು ಮೇಲಕ್ಕೆತ್ತಿದ್ದಾರೆ.





ಘಟನೆಯ ವಿವರ:
ರಜಾ ದಿನವಾದ ಭಾನುವಾರ ಜೋಯಲ್ ಡಿಸೋಜ ಅವರು ಸಂಜೆ ನಾಲ್ವರು ಸ್ನೇಹಿತರು ಸೇರಿ ನೇತ್ರಾವತಿ ನದಿಗೆ ಈಜಾಡಲು ಬಂದಿದ್ದು, ಅದರ ಜತೆಗೆ ಮೀನಿಗೆ ಗಾಳ ಹಾಕುತ್ತ ಮೋಜಿನಲ್ಲಿರುವಾಗಲೇ ಜೋಯಲ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಸುಳಿ ಇರುವ ಜಾಗದಲ್ಲಿ ಬಿದ್ದಿರುವ ಕಾರಣ ಈಜು ಬಂದರೂ ಜೋಯಲ್ ನೀರು ಪಾಲಾಗಿದ್ದಾರೆ .ಭಯ ಬೀತರಾದ ಸ್ನೇಹಿತರು ಸ್ಥಳೀಯ ಮೀನುಗಾರರ ಸಹಾಯ ಪಡೆದು ಹುಡುಕಾಟ ನಡೆಸಿದರಾದರು ಪ್ರಯೋಜನವಾಗಿಲ್ಲ. ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಹಾಗೂ ಸ್ಥಳೀಯ ಈಜುಗಾರರು ರಾತ್ರಿಯ ತನಕ ಹುಡುಕಾಟ ಕಾರ್ಯದಲ್ಲಿ ತೊಡಗಿದ್ದರೂ ಜೋಯಲ್ ಅವರ ಸುಳಿವು ಪತ್ತೆಯಾಗಿರಲಿಲ್ಲ .
ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.