ಮಂಗಳೂರು, ಜೂ. 04 (Daijiworld News/MB) : ಮುಂಬೈನಿಂದ ರೈಲು ಮಾರ್ಗವಾಗಿ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಸುಮಾರು 30 ಮಂದಿ ಆಗಮಿಸಿದ್ದು ಪೊಲೀಸರ ಸೂಚನೆಯಂತೆ ಆಟೋ,ಬಸ್ನಲ್ಲಿ ಮನೆಗೆ ತೆರಳಿದ್ದಾರೆ.
ದೆಹಲಿ, ಮುಂಬೈ, ಕೇರಳ ಸಂಪರ್ಕದ ರೈಲಿನಲ್ಲಿ ಮುಂಜಾನೆ 3.30 ಗಂಟೆಗೆ ಈ ಮೂವತ್ತು ಜನರು ಆಗಮಿಸಿದ್ದು ಈ ಪೈಕಿ 15 ಮಂದಿ ಮುಂಬಯಿಗರಾಗಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳು ಇಲ್ಲದ ಕಾರಣದಿಂದಾಗಿ ಮೂವರು ತಾವಾಗಿಯೇ ಸುರತ್ಕಲ್ ನಾಡ ಕಚೇರಿಗೆ ತೆರಳಿ ಮುಂಬೈನಿಂದ ಬಂದ ವಿಚಾರ ತಿಳಿಸಿದ್ದಾರೆ.
ಮುಂಬೈನಿಂದ ಬಂದವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದ್ದು ಅಧಿಕಾರಿಗಳು ಮುಂಬೈಯಿಂದ ಬಂದ ಜನರ ಯಾವುದೇ ಮಾಹಿತಿ ಪಡೆದಿಲ್ಲ. ಪೊಲೀಸರು ಮನೆಯಲ್ಲೇ ಕ್ವಾರೆಂಟೈನ್ಗೆ ಒಳಗಾಗುವಂತೆ ಸೂಚನೆ ನೀಡಿದ್ದು ಮುಂಬೈನಿಂದ ಬಂದ ಜನರು ಕೂಡಾ ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.