ಮಂಗಳೂರು, ಮಾ 27 : ಸಾವಿರಾರು ಜನರು ಸಾಕ್ಷಿಯಾದ ರಾಮನವಮಿಯ ರಾವಣದಹನವು ರಾಮೋತ್ಸವದ ಭಾಗವಾಗಿದ್ದು ವಿಶ್ವ ಹಿಂದೂ, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ಇವರ ಆಶ್ರಯದಲ್ಲಿ ನಗರದ ನೆಹರು ಮೈದಾನದಲ್ಲಿ ಮಾ. 26 ರ ಸೋಮವಾರ ರಾತ್ರಿ ನಡೆಯಿತು.
ರಾಮೋತ್ಸವದ ಕೊನೆಯ ದಿನವಾದ ನಿನ್ನೆ ರಾತ್ರಿ ರಾವಣ ದಹನವನ್ನು ಬಹಳ ವಿಜೃಂಭಣೆಯಿಂದ ಪಟಾಕಿಗಳನ್ನು ಸಿಡಿಸಿ, ರಾವಣನ ಮೂರ್ತಿಗೆ ರಾಮ ಪಾತ್ರಧಾರಿ ಗುರಿ ಇಟ್ಟು ಹೂಡಿದ ಬಾಣ ಬೆಂಕಿ ಕ್ಷಣ ಮಾತ್ರದಲ್ಲಿ ರಾವಣ ಮೂರ್ತಿ ಹೊತ್ತಿ ಉರಿಯುವ ದೃಶ್ಯವನ್ನು ಸಾವಿರಾರು ಜನ ನೋಡಿ ಸಂಭ್ರಮಿಸಿದರು. ರಾವಣ ದಹನದ ಮುಂಚಿತವಾಗಿ ಅನೇಕ ಟ್ಯಾಬ್ಲೋ ಹಾಗೂ ಕರಾವಳಿಯ ಹುಲಿ ಕುಣಿತ ಜನರ ಕಣ್ಮನಸೆಳೆದವು.
ಕಾಯಕ್ರಮದಲ್ಲಿ ಎಂ ಬಿ ಪುರಾಣಿಕ್, ಶರಣ್ ಪಂಪ್ವೆಲ್, ಜಗದೀಶ ಶೇಣವ ಭಾಗವಹಿಸಿದ್ದರು.