ಬಂಟ್ವಾಳ,ಜೂ 04 (Daijiworld News/MSP): ತಾಲೂಕಿನ ಕಾವಳಕಟ್ಟೆಯ ಮನೆಯೊಂದರ ಬಳಿ ಅಪರೂಪಕ್ಕೆ ಕಾಣಸಿಗುವ ಬಿಳಿ ಬಣ್ಣದ ಹೆಬ್ಬಾವೊಂದು ಕಾಣಸಿಕ್ಕಿದ್ದು ಅದನ್ನು ಸುರಕ್ಷಿತವಾಗಿ ಪಿಲಿಕುಳಕ್ಕೆ ಕಳುಹಿಸಿಕೊಡಲಾಗಿದೆ.
ಕಾವಳಕಟ್ಟೆ ನಿವಾಸಿ ನೌಶಾದ್ ಅವರ ಮನೆಯಲ್ಲಿ ಈ ಹಾವು ಕಂಡುಬಂದಿದ್ದು, ತಕ್ಷಣ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಲಾಯಿತು. . ಅವರು ಸ್ಥಳಕ್ಕೆ ಭೇಟಿ ನೀಡಿ ಛಾಯಾಗ್ರಾಹಕರಾದ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಪ್ರಸಾದ್ ಅವರ ಸಹಕಾರದಿಂದ ಅದನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.
ಸ್ನೇಕ್ ಕಿರಣ್ ಹೇಳುವ ಪ್ರಕಾರ ಬಿಳಿ ಬಣ್ಣದ ಇಂತಹ ಹೆಬ್ಬಾವು ಸಿಗುವುದು ಅಪರೂಪವಾಗಿದ್ದುಹುಟ್ಟುವಾಗ ಚರ್ಮದ ವರ್ಣದ್ರವ್ಯದ ಕೊರತೆಯ ಹಿನ್ನೆಲೆಯಲ್ಲಿ ಹೀಗಾಗುತ್ತವೆ. ಹೀಗಾಗಿ ಅದನ್ನು "ಆಲ್ಬಿನೊ " ಎನ್ನಲಾಗುತ್ತದೆ. ಈಗಾಗಲೇ ಇದನ್ನು ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಪಿಲಿಕುಳಕ್ಕೆ ಕಳುಹಿಸಿಕೊಡಲಾಗಿದೆ ಎಂದಿದ್ದಾರೆ.