ಕಾಸರಗೋಡು, ಜೂ 04 (DaijiworldNews/SM): ಜಿಲ್ಲೆಯಲ್ಲಿ ಗುರುವಾರ 12 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. 6 ಮಂದಿ ಮಹಾರಾಷ್ಟ್ರದಿಂದ ಬಂದವರು, 5 ಮಂದಿ ವಿದೇಶದಿಂದ ಆಗಮಿಸಿದವರು, ಒಬ್ಬರಿಗೆ ಇನ್ನೊಬ್ಬರ ಸಂಪರ್ಕದಿಂದ ಸೋಂಕು ತಗುಲಿದೆ. ಈಗ ಜಿಲ್ಲೆಯಲ್ಲಿ 109 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದವರು ಮಹಾರಾಷ್ಟ್ರದಿಂದ ಆಗಮಿಸಿದ ಮಂಗಲ್ಪಾಡಿ ಗ್ರಾಮಪಂಚಾಯತ್ ನಿವಾಸಿ 50 ವರ್ಷದ ವ್ಯಕ್ತಿ, ಅವರ 16 ವರ್ಷದ ಪುತ್ರಿ, 21 ವರ್ಷದ ಮಹಿಳೆ, ಪಡನ್ನ ಗ್ರಾಮ ಪಂಚಾಯತ್ ನ 44 ವರ್ಷದ ವ್ಯಕ್ತಿ, ಚೆಂಗಳ ಗ್ರಾಮಪಂಚಾಯತ್ ನಿವಾಸಿ 42 ವರ್ಷದ ವ್ಯಕ್ತಿ, ವಲಿಯಪರಂಬ ನಿವಾಸಿ 48 ವರ್ಷದ ನಿವಾಸಿ ರೋಗ ಬಾಧಿತರು.
ವಿದೇಶದಿಂದ ಬಂದವರು ಕುವೈತ್ ನಿಂದ ಆಗಮಿಸಿದ 34 ವರ್ಷದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿ, 24 ವರ್ಷದ ಪುಲ್ಲೂರು-ಪೆರಿಯ ಗ್ರಾ.ಪಂ. ನಿವಾಸಿ, 25 ವರ್ಷದ ಅಜಾನೂರು ನಿವಾಸಿ, ದುಬಾಯಿಯಿಂದ ಆಗಮಿಸಿದ 21 ವರ್ಷದ ಚೆಮ್ನಾಡ್ ಗ್ರಾ.ಪಂ. ನಿವಾಸಿ ಮಹಿಳೆ, ಶಾರ್ಜಾ ದಿಂದ ಆಗಮಿಸಿದ 48 ವರ್ಷದ ಉದುಮಾ ಪಂಚಾಯತ್ ನಿವಾಸಿ ರೋಗ ಬಾಧಿತರು.
ಕಾಸರಗೋಡು ನಗರಸಭೆ ವ್ಯಾಪ್ತಿಯ 25 ವರ್ಷದ ವ್ಯಕ್ತಿಗೆ ಸೋಂಕು ದ್ರಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 3940 ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3269 ಮಂದಿ, ಆಸ್ಪತ್ರೆಗಳಲ್ಲಿ 671 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 255 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 739 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.