ಉಪ್ಪಿನಂಗಡಿ, ಜೂ 04 (DaijiworldNews/SM): ಇಲ್ಲಿನ ಗ್ರಾ. ಪಂ. ಪಿ.ಡಿ.ಒ ವ್ಯಾಪಾರಿಯ ಮೇಲೆ ದರ್ಪ ತೋರಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. ಕಾರಣ ನೀಡದೆ ಮೀನು ವ್ಯಾಪಾರಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ವ್ಯಾಪಾರಕ್ಕೆ ಅಡ್ಡಿಪಡಿಸಿದ ಉಪ್ಪಿನಂಗಡಿ ಪಿ.ಡಿ.ಒ. ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಪಿ.ಡಿ.ಒ. ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯ ಅಶೋಕ್ ಶೆಟ್ಟಿಯಿಂದ ಹೊಸದಾಗಿ ಮೀನು ವ್ಯಾಪಾರ ಆರಂಭವಾಗಿತ್ತು. ಗೂಡ್ಸ್ ಟೆಂಪೋದಲ್ಲಿ ಸಂಚಾರಿ ಮೀನು ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಬಲವಂತವಾಗಿ ಕೀ ಪಡೆದು ಅಧಿಕಾರಿ ದರ್ಪ ತೋರಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಮೀನು ವ್ಯಾಪಾರಿಯ ಕುಮ್ಮಕ್ಕಿನಿಂದ ಪಿಡಿಒ ಈ ರೀತಿ ಮಾಡಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ. ಇನ್ನು ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.