ಮಂಗಳೂರು, ಜೂ 05 (Daijiworld News/MSP): ಕೊರೊನಾ ಹುಟ್ಟಿಸಿದ ಭೀತಿಯೂ ನಡುವೆ ಜನಜೀವನ ನಿಧಾನವಾಗಿ ಸಹಜತೆಯತ್ತ ತೆರೆದುಕೊಳ್ಳುತ್ತಿದೆ. ಜೂ.1 ರಿಂದ ನಗರದಲ್ಲಿ ಬಸ್ಸು ಸಂಚಾರವೂ ಪ್ರಾರಂಭವಾಗಿದೆ. ಇದಕ್ಕಾಗಿ ನಗರದಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ಖಾಸಗಿ ಬಸ್ ನಿರ್ವಾಹಕರು ಸಾಂಕ್ರಮಿಕ ರೋಗ ಕೋವಿಡ್ - 19 ನಿಂದ ರಕ್ಷಣೆಗಾಗಿ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
ಸ್ಟೇಟ್ ಬ್ಯಾಂಕ್ನಿಂದ ಶಕ್ತಿನಗರಕ್ಕೆ ತೆರಳುವ ರೂಟ್ ನಂಬ್ರ 6ಎ ನಗರ ಸಂಚಾರದ ಬಸ್ಸಿನ ಕಂಡೆಕ್ಟರ್ ಕೊರೊನಾ ರೋಗದಿಂದ ರಕ್ಷಣೆ ಪಡೆಯಲೆಂದು ಪಿಪಿಇ ಕಿಟ್ ಮಾದರಿಯಲ್ಲಿ ರಕ್ಷಣಾ ಕವಚ ಅಳವಡಿಸಿಕೊಂಡಿದ್ದಾರೆ.
ಕೈಗವಸು, ಆರೋಗ್ಯ ತಪಾಸಣೆ, ಮಾಸ್ಕ್ ಹಾಕಿ ಕರ್ತವ್ಯ ನಿರ್ವಹಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಚಿಸಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಬಸ್ಸಿನ ನಿರ್ವಾಹಕರು ಕೋವಿಡ್ ರಕ್ಷಣಾ ಕವಚ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.