ಮಂಗಳೂರು, ಜೂ 05 (Daijiworld News/MSP): ಕರಾವಳಿ ಅವಿಭಜಿತ ಜಿಲ್ಲೆಯಲ್ಲೂ ಕೊರೊನಾ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಜೂನ್ 5 ಶುಕ್ರವಾರದಂದು ದಕ್ಷಿಣ ಕನ್ನಡ ದಲ್ಲಿ ೮ ಪ್ರಕರಣ ಪತ್ತೆಯಾಗಿದ್ದರೆ ಉಡುಪಿಯಲ್ಲಿ 204 ಜನರು ಪಾಸಿಟಿವ್ ಪ್ರಕರಣ ವರದಿಯಾಗಿದೆ.
ದಕ್ಷಿಣ ಕನ್ನಡದಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದ ಎಂಟು ಜನರಲ್ಲಿ, ಏಳು ಮಂದಿ ಮಹಾರಾಷ್ಟ್ರದ ಮರಳಿದವರಾಗಿದ್ದರೆ, ಇನ್ನೂ ಒಬ್ಬ ವ್ಯಕ್ತಿಯ ಸೋಂಕಿನ ಮೂಲವನ್ನು ಕಂಡುಹಿಡಿಯಲಾಗಿಲ್ಲ.
ಎಂಟು ಸೋಂಕಿತರಲ್ಲಿ, ಏಳು ಮಂದಿ 58, 36, 52, 24, 48, 43 , 43 ವರ್ಷದ ಪುರುಷರು ಮತ್ತು 60 ವರ್ಷ ಮಹಿಳೆಯಾಗಿದ್ದಾರೆ. ಮಹಿಳೆಯೂ ಸೊಂಕು ಹರಡಲಾದ ಮೂಲವನ್ನು ಇನ್ನೂ ಪತ್ತೆ ಮಾಡಿಲ್ಲ.
ಇನ್ನುಉಡುಪಿಯಲ್ಲಿ 204 ಪ್ರಕರಣಗಳಲ್ಲಿ 203 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಓರ್ವರು ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. 157 ಪುರುಷರು, 40 ಮಹಿಳೆಯರು ಮತ್ತು ಏಳು ಮಕ್ಕಳಿಗೆ ಸೋಂಕು ಹರಡಿದೆ.