ಬಂಟ್ವಾಳ, ಜೂ 05 (DaijiworldNews/SM): ಇಲ್ಲಿನ ನೆಟ್ಲಮುಡ್ನೂರು ಗ್ರಾಮದ ವೃದ್ಧ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿರುವುದು ತಾಲೂಕಿನಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆಂದು ಇವರು ದಾಖಲಾಗಿದ್ದರು. ಈತನ್ಮಧ್ಯೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲು ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ, ಕಳೆದ ತಿಂಗಳು ಬಂಟ್ವಾಳದಲ್ಲಿ ಕೊರೊನಾ ಜನತೆಯ ನಿದ್ದೆಗೆಡಿಸಿತ್ತು. ಆದರೆ, ಇದೀಗ ಮತ್ತೆ ಪಾಸಿಟಿವ್ ಬಂದಿದ್ದು, ಜನತೆಯ ನಿದ್ದೆಗೆಡಿಸಿದೆ. ಆದರೆ, ಜನತೆ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ಆತಂಕಗೊಳ್ಳುವ ಅಗತ್ಯವಿಲ್ಲ.
ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟುವಿನಲ್ಲಿರುವ ಇವರ ಮನೆಯಲ್ಲಿದ್ದ ಇತರ ಇಬ್ಬರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.