ಮಾ, 27: ರಾಹುಲ್ ಗಾಂಧಿಯವರನ್ನು ಸಂಭಾವ್ಯ ಪ್ರಧಾನಿ ಎಂದು ಕಾಂಗ್ರೆಸ್ ಪಕ್ಷ ಬಿಂಬಿಸುತ್ತದೆ, ಆದರೆ ರಾಹುಲ್ ಗಾಂಧಿಯವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ ಅವರು ಪಾಪ ಪಾಂಡು ಇದ್ದಂಗೆ ಎಂದು ಮಾಜಿ ಸಂಸದ, ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಯಾರೋ ಬರೆದುಕೊಟ್ಟ ಭಾಷಣವನ್ನು ಓದುವ ರಾಹುಲ್ ಗಾಂಧಿಗೆ, ಮೆಚ್ಯುರಿಟಿ ಎನ್ನುವುದು ಸ್ವಲ್ಪವೂ ಇಲ್ಲ. ಇನ್ನು ರಾಹುಲ್ ಗೆ 130 ಕೋಟಿ ಜನರನ್ನು ಆಳುವ ಅರ್ಹತೆ ಎಲ್ಲಿಂದ ಬರಬೇಕು ಎಂದು ಕಿಡಿಕಾರಿದ್ದಾರೆ. ಎನ್ ಸಿಸಿ, ಎನ್ ಎಸ್ ಎಸ್ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದ ರಾಹುಲ್ ಗೆ ದೇಶವನ್ನು ಆಳುವ ನಾಯಕ ಆಗುತ್ತಾರೆ ಅಂದರೆ ಒಪ್ಪುವುದಾದರು ಹೇಗೆ? ಎಂದು ಪ್ರಶ್ನಿಸಿದರು. ಹೀಗಾಗಿ ರಾಹುಲ್ ಗಾಂಧಿಯವರನ್ನು ಪಾಪಾ ಪಾಂಡು ಅನ್ನುವುದೇ ಸರಿ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವ್ಯಂಗ್ಯವಾಡಿದರು.